ಪೋಷಕರೆ, ನಿಮ್ಮ ಮಕ್ಕಳೂ ಡಿಫೆಶನ್ಗೆ ಹೋಗಬಹುದು ಹುಷಾರ್! Dr. B M Hegde talks about Depression | Saral Jeevan

Поделиться
HTML-код
  • Опубликовано: 8 сен 2024
  • ಪೋಷಕರೆ, ನಿಮ್ಮ ಮಕ್ಕಳೂ ಡಿಫೆಶನ್ಗೆ ಹೋಗಬಹುದು ಹುಷಾರ್! Dr. B M Hegde talks about Depression - One of the Major Mental Health Problem | Saral Jeevan
    ಸಾಮಾನ್ಯ ಜೀವನದಲ್ಲಿ ಭಾವನಾತ್ಮಕ ಹಾಗೂ ಆತ್ಮವಿಶ್ವಾಸದಲ್ಲಿ ಕುಸಿತ ಉಂಟಾಗುವುದು. ಭಾವನಾತ್ಮಕವಾಗಿ ಯಾವುದೇ ಆಶಯವು ಇಲ್ಲದೆ ಇರುವುದನ್ನು ಖಿನ್ನತೆ ಎಂದು ಹೇಳಲಾಗುತ್ತದೆ. ಜೀವನದ ಸಮಸ್ಯೆ ಹಾಗೂ ಹಿನ್ನಡೆಗೆ ಪ್ರತಿಕ್ರಿಯೆಯು ತುಂಬಾ ಬೇಸರದಿಂದ ಕೂಡಿರುವುದು.ದೈನಂದಿನ ಚಟುವಟಿಕೆಗಳಲ್ಲಿ ನೀವು ಆಲೋಚಿಸುವ, ಭಾವಿಸುವಂತಹ ರೀತಿಯು ಬದಲಾಗುವುದನ್ನು ಖಿನ್ನತೆ ಎಂದು ಹೇಳಲಾಗುತ್ತದೆ. ಇದು ನಿಮ್ಮ ವೃತ್ತಿ, ಶಿಕ್ಷಣ, ಊಟ, ನಿದ್ರೆ ಮತ್ತು ಜೀವನ ಆನಂದಿಸುವ ಮೇಲೆ ಪರಿಣಾಮ ಬೀರುವುದು.
    ಕೆಲವು ಜನರು ಜೀವನವನ್ನು ಒಂದು ಕಪ್ಪು ರಂಧ್ರವೆಂದು ಭಾವಿಸಿದರೆ, ಇನ್ನು ಕೆಲವರು ಇದು ಜೀವನವು ಕಾರ್ಮೋಡ, ನಿಸ್ತೇಜ, ಖಾಲಿ ಮತ್ತು ನಿರಾಶದಾಯಕ ಎಂದು ಭಾವಿಸುವರು. ಪುರುಷರು ಹೆಚ್ಚಾಗಿ ತುಂಬಾ ಕೋಪ ಮತ್ತು ಆರಾಮವಿಲ್ಲದಂತೆ ಇರುವರು.ಖಿನ್ನತೆಗೆ ಸರಿಯಾದ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ಮುಂದಿನ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಾಗಿ ಕಾಡಬಹುದು. ನಿಸ್ಸಾಯಕ ಮತ್ತು ನಿರಾಶೆಯ ಭಾವನೆ ಹೊಂದಿರುವುದು ಖಿನ್ನತೆಯ ಲಕ್ಷಣಗಳು ಮತ್ತು ಇದು ವಾಸ್ತವ ಪರಿಸ್ಥಿತಿಯಲ್ಲ ಎನ್ನುವುದನ್ನು ಗಮನಿಸಬೇಕು.
    ನೀವು ಎಷ್ಟೇ ನಿರಾಶರಾದರೂ ಮತ್ತೆ ಉತ್ತಮ ಭಾವನೆ ಹೊಂದಬಹುದು. ಖಿನ್ನತೆಗೆ ಕಾರಣ ಮತ್ತು ಅದರ ಲಕ್ಷಣಗಳು ಹಾಗೂ ಅದರ ವಿಧಗಳನ್ನು ತಿಳಿದುಕೊಂಡು ನೀವು ಉತ್ತಮ ಭಾವನೆ ಪಡೆಯಬಹುದು ಮತ್ತು ಸಮಸ್ಯೆಯಿಂದ ಹೊರಬರಬಹುದು ಎನ್ನುತ್ತದೆ ವೈದ್ಯಲೋಕ. ಈ ಬಗ್ಗೆ ವಿವರಣೆ ನೀಡಿದ್ದಾರೆ ಖ್ಯಾತ ವೈದ್ಯ ಡಾ ಬಿ ಎಮ್‌ ಹೆಗ್ಡೆ.
    #drbmhegde #bmhegdeinterview #depression #ಡಿಫ್ರೆಶನ್ #ಆರೋಗ್ಯ #ಸರಳಜೀವನ

Комментарии • 17