ನಾಗದೇವರಿಗೆ ಪ್ರಿಯವಾದ ಹೂವಂತೆ !! 4k Video ಯಾವ ಹೂವು ?? ಈ ಹೂವಿನ ವಿಶೇಷತೆಗಳೇನು ?? ವೀಕ್ಷಿಸಿ ತಿಳಿಯಿರಿ !!

Поделиться
HTML-код
  • Опубликовано: 28 сен 2024
  • ನಿರೂಪಣೆ, ಸಂಕಲನ - ರಾಜೇಶ್ ಶ್ಯಾನುಭೋಗ್ ಬಾರ್ಕೂರು
    ------------------------------------------------------------------------------------------------------------------
    * ಕಣ್ಣಿನ ಆರೈಕೆಗೆ ಸುಲಭದ ಮನೆಮದ್ದು: ಕೆಂಡ ಸಂಪಿಗೆ ಹೂವಿನ ಎರಡು ಎಲೆಯನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ದಿನವೂ ಕಣ್ಣು ತೊಳೆಯುವುದರಿಂದ ಕಣ್ಣಿನ ಅನೇಕ ಕಾಯಿಲೆಗಳು ವಾಸಿ ಆಗುತ್ತವೆ. ಇದು ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ ಮತ್ತು ಆರಂಭಿಕ ಕಣ್ಣಿನ ಪೊರೆಯನ್ನು ತೆಗೆದು ಸರಿ ಮಾಡುವ ಸಾಮರ್ಥ್ಯ ಇದೆ.
    * ಸಂಧಿವಾತವಿದ್ದರೆ ಒಂದು ಕಪ್ ಹರಳೆಣ್ಣೆಯಲ್ಲಿ ಸಂಪಿಗೆಯ ಐದಾರು ಹೂಗಳನ್ನು ಹಾಕಿ ಬೆಚ್ಚಗೆ ಮಾಡಿ ನೋವಿರುವ ಜಾಗಕ್ಕೆ ಸವರಿದರೆ ನೋವು ನಿವಾರಣೆಯಾಗುತ್ತದೆ.
    * ತಲೆಕೂದಲು ಉದುರುತ್ತಿದ್ದರೆ, ಹೊಟ್ಟು ಹೆಚ್ಚಾದರೆ, ನಿಂಬೆಹಣ್ಣಿನ ರಸದಲ್ಲಿ ಸಂಪಿಗೆ ಹೂವುಗಳನ್ನು ರಾತ್ರಿ ಪೂರಾ ನೆನೆಹಾಕಿ ಮುಂಜಾನೆ ಹೂಗಳನ್ನು ಹಿಸುಕಿ ತೆಗೆದು ತಲೆಕೂದಲಿನ ಬುಡಕ್ಕೆ ಹಚ್ಚಿ.
    * ಸಂಪಿಗೆ ಚಕ್ಕೆಯನ್ನು ಅರೆಬರೆ ಕುಟ್ಟಿ ನೀರು ಹಾಕಿ ಕುದಿಸಿ ಅರ್ಧಕ್ಕೆ ಇಳಿದಾಗ ಸೋಸಿ ಜ್ವರದಲ್ಲಿ ಮೂರು ಚಮಚದಷ್ಟು ಪ್ರತಿ ಎರಡು ಗಂಟೆಗೆ ಕುಡಿಯುತ್ತಿದ್ದರೆ ಗುಣವಾಗುತ್ತದೆ.
    * ಸಂಪಿಗೆ ಚಕ್ಕೆಯ ಕಷಾಯವನ್ನು ಸತತವಾಗಿ ಆರು ತಿಂಗಳು ಕುಡಿಯುವುದರಿಂದ ರಕ್ತ ಶುದ್ಧವಾಗಿ ಚರ್ಮದ ಕಾಯಿಲೆಗಳು ಗುಣವಾಗುತ್ತದೆ. ಸಂಪಿಗೆ ಚಕ್ಕೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿ ಬಾಯಲ್ಲಿ ಇಟ್ಟು ರಸ ನುಂಗುತ್ತಿದ್ದರೆ ಟಾನ್ಸಿಲ್ಸ್​​ ಗುಣವಾಗುತ್ತದೆ.
    * ಒಂದು ಚಮಚದಷ್ಟು ಸಂಪಿಗೆ ಹೂವಿನ ರಸವನ್ನು ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ತಿಂದು ಹೂವು ಇಲ್ಲವಾದಲ್ಲಿ ಎಲೆಗಳನ್ನು ಉಪಯೋಗಿಸಬಹುದು. ಒಂಬತ್ತನೇ ದಿನ ಭೇದಿಯಾಗಲು ತೆಗೆದುಕೊಳ್ಳುವುದರಿಂದ ಉದರದ ಕ್ರಿಮಿ ನಾಶವಾಗುತ್ತದೆ.
    * ಸಂಪಿಗೆಯ ಎಳೆಯ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿ ಕಷಾಯ ಮಾಡಿ ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
    * ಸಂಪಿಗೆಯ ಕುಸುಮವನ್ನು ಪ್ರತಿನಿತ್ಯ ತಿನ್ನುವುದರಿಂದ ವೀರ್ಯ ವೃದ್ಧಿಸುತ್ತದೆ.
    * ಸಂಪಿಗೆಯ ಕುಸುಮವನ್ನು ಬೆಣ್ಣೆಯಲ್ಲಿ ಲೇಪಿಸಿ, ಅರ್ಧ ಚಮಚ ತಿಂದರೆ ರಕ್ತ ಮೂಲವ್ಯಾಧಿ ಗುಣವಾಗುತ್ತದೆ. ಸಂಪಿಗೆಯ ಕುಸುಮವನ್ನು ಜೇನುತುಪ್ಪ ಸೇರಿಸಿ ತಿಂದರೆ ಬಿಕ್ಕಳಿಕೆ ನಿಲ್ಲುತ್ತದೆ.
    * ಸಂಪಿಗೆಯ ಇತರೆ ಉಪಯೋಗಗಳು: ಸಂಪಿಗೆ ಮರವನ್ನು ತೇಗದ ಮರದಂತೆ ಉಪಯೋಗಿಸುತ್ತಾರೆ. ವಿಮಾನ ಹಡಗು ನಿರ್ಮಾಣಕ್ಕೆ, ಮಠಾಧೀಶ್ವರರನ್ನು ಹೊರುವ ಅಡ್ಡಪಲ್ಲಕ್ಕಿ, ಆಟದ ಗೊಂಬೆ, ಬರೆಯುವ ಪೆನ್ಸಿಲ್, ಪ್ಲೈವುಡ್ ಪೀಠೋಪಕರಣಗಳ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ. (ವಾಟ್ಸಪ್ ಲೇಖನ- ಸುಮನಾ ಮಳಲಗದ್ದೆ)
    ---------------------------------------------------------------------------------------------------------------------------

Комментарии • 8

  • @harishbachenahalli4246
    @harishbachenahalli4246 3 месяца назад +1

    🙏🙏🙏🙏🙏

  • @Saraswathi.R786
    @Saraswathi.R786 3 месяца назад +1

    Near our office in shivaji nagar we have same tree lots of flowers very perfume perfume smell big size

  • @Saraswathi.R786
    @Saraswathi.R786 3 месяца назад +1

    In Ulsoor subramanian swamy temple also available this tree

  • @hariprasadk9437
    @hariprasadk9437 3 месяца назад +1

    ಉತ್ತಮ ಮಾಹಿತಿ

  • @sarojanaik6735
    @sarojanaik6735 3 месяца назад +1

    🙏🙏🙏🙏🙏🙏🙏

  • @rudvikatanvi
    @rudvikatanvi 3 месяца назад

    Nanage Thunba Thumba Priyavada Ishtavada Nagalinga Pushpa Sampige Hoovu Thale Hoovu Thale Gari andre Thumba ishta idna nange Thandu kottaga agiruva Kushi santhosha Jeevandalli maodlu thale gariya mele 3 days malgidde🐍💎✋🏻🔱📿🕉️🌷

  • @poornimaajay4544
    @poornimaajay4544 3 месяца назад

    Superb sir🙏🌹