ದನಗಳ ಶೆಡ್ ನಿರ್ಮಾಣಕ್ಕಾಗಿ ಸಹಾಯಧನ ಅರ್ಜಿ ಆಹ್ವಾನ.

Поделиться
HTML-код
  • Опубликовано: 10 сен 2024
  • ಪ್ರೀಯ ರೈತರೇ ನಮ್ಮ ರಾಜ್ಯ ಸರ್ಕಾರವು ಈಗಾಗಲೇ ಸಾರ್ವಜನಿಕರ ಪರವಾಗಿ ನಿಂತು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಸಾಮಾನ್ಯ ಜನರ ಮತ್ತು ಕೂಲಿ ಕಾರ್ಮಿಕರ ಏಳಿಗೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದಿನಗೂಲಿ ಕೆಲಸ ಮಾಡಲು ಇದೊಂದು ಉತ್ತಮ ಅವಕಾಶ ಸಿಗಲಿದೆ.
    ಈ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಈಗ ಸರ್ಕಾರವು ಮತ್ತೋಂದು ಮಹತ್ವದ ಸೂಚನೆ ನೀಡಿದೆ. ಹೈನುಗಾರಿಕೆ ಉತ್ಪಾದನೆ ಹೆಚ್ಚಿಸಲು ಹಾಗೂ ಉದ್ಯೋಗ ಸೃಷ್ಟಿಸುವ ಸಲುವಾಗಿ ದನಗಳ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಲು ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ಯ ಇಲಾಖೆಗಳು ಮೊದಲು ನೀಡುತ್ತಿರುವ ಸಹಾಯಧನವನ್ನು ಹೆಚ್ಚಳ ಮಾಡಿ, ರಾಜ್ಯದ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. ಇದರಿಂದ ರೈತರಿಗೆ ಸರ್ಕಾರದಿಂದ ಬಹಳ ಸಹಾಯ ಆಗಲಿದೆ.
    ಪ್ರೀಯ ರೈತರೇ ನೀವು ಸಹ ಹೈನುಗಾರಿಕೆ ಮಾಡಲು ಬಯಸಿದ್ದರೆ ಕೂಡಲೆ ಎಲ್ಲಿ ನಿಮ್ಮ ಜಾಗವಿದೆಯೋ ಅಲ್ಲಿ ನೀವು ದನದ ಕೊಟ್ಟಿಗೆ ಅಥವಾ ದನದ ಶೆಡ್ ಅನ್ನು ನಿರ್ಮಾಣ ಮಾಡಲು ಪಂಚಾಯಿತಿ ವತಿಯಿಂದ ರೈತರಿಗೆ ಮತ್ತು ಆಸಕ್ತರಿಗೆ ಸಹಾಯಧನ ನೀಡಲಾಗುತ್ತದೆ. ಇದನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು. ಈ ಯೋಜನೆಯಲ್ಲಿ ಹಿಂದೆ ಉದ್ಯೋಗ ಖಾತರಿ ಯೋಜನೆಯಡಿ ದನಗಳ ಸೆಡ್ ನಿರ್ಮಾಣಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 43,000ರೂ.ಗಳ ಸಹಾಯಧನ ಹಾಗೂ ಸಾಮಾನ್ಯ ವರ್ಗದವರಿಗೆ 19,000 ರೂ.ಗಳ ಸಹಾಯಧನವನ್ನು ಈ ನರೇಗಾ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನೀಡಲಾಗುತ್ತಿತ್ತು. ಆದರೆ ಸರ್ಕಾರವು ಒಂದು ಹೆಜ್ಜೆ ಮುಂದೆ ಇಟ್ಟು ಸಹಾಯಧನ ಹೆಚ್ಚು ಮಾಡಿದೆ.
    ಈ ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಕಡೆಯಿಂದ ಸಹಾಯಧನವನ್ನು
    ಸಾಮಾನ್ಯ ವರ್ಗದವರಿಗೂ ಸಹ 57,000ರೂ.ಗಳ ಸಹಾಯಧನ ಈ ಯೋಜನೆ ಅಡಿಯಲ್ಲಿ ನೀಡಲಾಗುವುದು.
    ಮುಖ್ಯವಾಗಿ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಸಹಾಯಧನ ಹೆಚ್ಚಳ ಮಾಡಿದ ನಂತರ ಒಟ್ಟು ಸಹಾಯಧನವಾಗಿ 57,000 ರೂ ಸಿಗುತ್ತದೆ. ಸರ್ಕಾರವು ಈಗ ಈ ಮೊತ್ತವನ್ನು ಎಲ್ಲಾ ಸಾಮಾನ್ಯ ವರ್ಗದವರಿಗೂ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೂ ಸಮವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು. ಈ ಸಹಾಯಧನ ಮೊತ್ತದಲ್ಲಿ ಅಂದರೆ ಒಟ್ಟಾರೆ ನೀಡುವ 57,000ರೂ.ಗಳಲ್ಲಿ ಎರಡು ಭಾಗಗಳಾಗಿ ವಿಂಗಡಿಸಿ ಹಣವನ್ನು ನೀಡುತ್ತಾರೆ. ಹೇಗೆಂದರೆ 10,556ರೂ.ಗಳನ್ನು ಕೂಲಿ ಮೊತ್ತವಾಗಿ ಈ ಯೋಜನೆಯಡಿ ನೀಡಲಾಗುತ್ತದೆ. ಹಾಗೂ ಸುಮಾರು 46,644ರೂ.ಗಳನ್ನು ಈ ಯೋಜನೆಯಡಿಯಲ್ಲಿ ದನಗಳ ಕೊಟ್ಟಿಗೆ ಅಥವಾ ದನದ ಶೆಡ್ ನಿರ್ಮಾಣ ಮಾಡಲು ಬೇಕಾಗುವ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಈ ಯೋಜನೆಯ ಅಡಿಯಲ್ಲಿ ಸಹಾಯಧನ ನೀಡಲಾಗುತ್ತದೆ.
    ಈ ಕೊಟ್ಟಿಗೆಯನ್ನು ನಿರ್ಮಾಣ ಮಾಡಲು ಸಾಮಾನ್ಯವಾಗಿ 22,000ರೂ.ಗಳ ಖರ್ಚು ಬರುತ್ತದೆ. ಇಲ್ಲಿ ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಒಟ್ಟು ಸಹಾಯಧನ 43,000ರೂ.ಗಳು ಬರುತ್ತದೆ. ಇದರಿಂದ ರೈತರು ಸ್ವಾವಲಂಬಿ ಜೀವನ ನಡೆಸಲು ಇದು ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೈನುಗಾರಿಕೆ ಕ್ಷೇತ್ರಕ್ಕೆ ಬಹಳ ಪ್ರಾಮುಖ್ಯತೆ ನೀಡಿದಂತಾಗುತ್ತದೆ.
    ಈ ಯೋಜನೆ ಪಡೆಯಲು ಇರಬೇಕಾದ ಅರ್ಹತೆಗಳು -
    • ಆಸಕ್ತರು ಕನಿಷ್ಠ 4 ಜಾನುವಾರುಗಳನ್ನು ಹೊಂದಿರಬೇಕು.
    • ಕಡ್ಡಾಯವಾಗಿ ಉದ್ಯೋಗ ಖಾತ್ರಿ ಯೋಜನೆ ಚೀಟಿ (ಕಾರ್ಡ್) ಹೊಂದಿರಬೇಕು.
    • ಈ ಯೋಜನೆ ಪಡೆಯಲು ಆಸಕ್ತರು ತಮ್ಮ ಹತ್ತಿರದಲ್ಲೇ ಇರುವ ಪಶುವೈದ್ಯಾಧಿಕಾರಿಗಳಿಂದ ಜಾನುವಾರು ಇರುವ ಕುರಿತು ದೃಢೀಕರಣ ಪತ್ರವನ್ನು ಹೊಂದಿರಬೇಕು.
    • ಆಧಾರ್ ಕಾರ್ಡ್ ನಿಖರವಾಗಿ ಇರಬೇಕು.
    • ಬ್ಯಾಂಕ್ ಪಾಸ್ ಬುಕ್ ಝೆರಾಕ್ಸ್ ಹೊಂದಿರಬೇಕು.
    • ಈ ಮೇಲೆ ತಿಳಿಸಿದ ದಾಖಲಾತಿಗಳೊಂದಿಗೆ ಸ್ಥಳೀಯ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಶೆಡ್ ನಿರ್ಮಾಣಕ್ಕೆ ಅರ್ಜಿಯನ್ನು ಸಲ್ಲಿಸಬೇಕು.
    • ನಂತರ ಅಲ್ಲಿ ಗ್ರಾಮ ಪಂಚಾಯಿತಿಯವರ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಯಾರು ಫಲಾನುಭವಿ ಹೊಂದಿರುತ್ತಾರೊ ಅವರ ಹೆಸರು ಸೇರಿಸಿಕೊಂಡು ಮೇಲಾಧಿಕಾರಿಗಳಿಂದ ಅನುಮೋದನೆ ಪಡೆದ ನಂತರ ರೈತರು ಅವರ ದನದ ಕೊಟ್ಟಿಗೆಯ ಕಾಮಗಾರಿಯನ್ನು ಪ್ರಾರಂಭಿಸಬೇಕು.
    • ಮುಖ್ಯವಾಗಿ ರೈತರು ಉದ್ಯೋಗ ಖಾತ್ರಿ ಯೋಜನೆ ಕಾರ್ಡ್ ನಿಖರವಾಗಿ ಇರಬೇಕು ಹಾಗೂ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.
    ಸರ್ಕಾರವು ರೈತರ ಹಿತದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದೀಗ ದನದ ಶೆಡ್ ನಿರ್ಮಾಣ ಮಾಡಿಕೊಳ್ಳಲು ಸಹಾಯ ಧನ ಹೆಚ್ಚಿಸಿದೆ. ರೈತರು ಇದರ ಸದುಪಯೋಗ ಪಡಿಸಿಕೊಂಡು ಕೃಷಿಯಲ್ಲಿ ಹಾಗೂ ಸ್ವಯಂ ಉದ್ಯೋಗ ಹೊಂದಲು ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಥವಾ ಸಂಬಂಧಪಟ್ಟ ಪಂಚಾಯಿತಿಯನ್ನು ಸಂಪರ್ಕಿಸಿರಿ.
    #ಮಹಾತ್ಮ_ಗಾಂಧಿ_ರಾಷ್ಟ್ರೀಯ_ಉದ್ಯೋಗ ಖಾತರಿ_ಯೋಜನೆ
    #ಕರ್ನಾಟಕ_ಸರ್ಕಾರ

Комментарии • 7

  • @parashuram9213
    @parashuram9213 Год назад +1

    Sir city jana scheme use madakollakke ಬರುತ್ತಾ sir

    • @user-ix9rj8oe6s
      @user-ix9rj8oe6s  Год назад

      ಇಲ್ಲಾ sir ಇದು ಗ್ರಾಮಪಂಚಾಯತಿ ಅಂದರೆ ಹಳ್ಳಿಜನರಿಗೆ ಮಾತ್ರ

  • @Girish-yg5bg
    @Girish-yg5bg 2 года назад +1

    ನಂಬರ್ ಕೊಡಿ ಸರ್

  • @niz8444
    @niz8444 2 года назад

    10*20 shed cost yestu agathe.

  • @shivupujari9316
    @shivupujari9316 Год назад

    ನಂಬರ್ ಸೇಡ ಮೀ