kubusada hadu|ಹಸಿರು ಕಡ್ಡಿಯ ಸೀರಿ|babyshower song|ಸೀಮಂತ ಹಾಡು|kyadagighama

Поделиться
HTML-код
  • Опубликовано: 12 сен 2024
  • ನನ್ನ ಎಲ್ಲಾ ಪ್ರೀತಿಯ ವೀಕ್ಷಕರಿಗೆ ಹೃತ್ಪೂರ್ವಕ ಧನ್ಯವಾದಗಳು. ಇವತ್ತು ಮತ್ತೊಂದು ಜಾನಪದ ಹಾಡಿನೊಂದಿಗೆ ಹೊಸ ಪ್ರಯತ್ನ ಮಾಡಿದ್ದೇನೆ. ಒಬ್ಬ ಗರ್ಭ ಧರಿಸಿರುವ ಹೆಣ್ಣುಮಗಳು ತನಗೆ ಇರುವಂತಹ ಬಯಕೆಗಳನ್ನ, ಆಸೆ- ಆಕಾಂಕ್ಷೆಗಳನ್ನು ಹಾಡಿನ ಮೂಲಕ ವ್ಯಕ್ತ ಪಡಿಸಿರುವ ರೀತಿಯನ್ನು ವಿಡಿಯೋ ಮುಖಾಂತರ ತೋರಿಸಿ ಕೊಡುವ ಒಂದು ಪುಟ್ಟ ಪ್ರಯತ್ನ ಮಾಡಿದ್ದೇನೆ. ಇವತ್ತಿನ ವಿಡಿಯೋ ತಮಗೆಲ್ಲರಿಗೂ ಇಷ್ಟ ಆಗುತ್ತದೆ ಎಂದು ಭಾವಿಸಿದ್ದೇನೆ.
    ಈ ವಿಡಿಯೋ ಇಷ್ಟಾ ಆದ್ರೆ, like 👍 ಮಾಡ್ರಿ. ನನ್ನ channel SUBSCRIBE ಮಾಡ್ರಿ. ಮತ್ತಷ್ಟು ಜಾನಪದ ಹಾಡುಗಳನ್ನು ವಿಡಿಯೋ ಮುಖಾಂತರ ನೋಡ ಬಯಸಿದಲ್ಲಿ, ನನ್ನನ್ನು ಪ್ರೋತ್ಸಾಹಿಸಲು comment ಮತ್ತು ಈ ವಿಡಿಯೋನ ಹೆಚ್ಚು share ಮಾಡ್ರಿ.
    ಧನ್ಯವಾದಗಳೊಂದಿಗೆ
    Dr. B. M. Baraker (Khushi)
    Hello my dear friends, I am back with one more folk song videography. In this video a pregnent woman explains about her desires. Woman gets some special feelings during her pregnancy period. She wish to wear special Ilkal Sari, on a arm she would like to wear ornament called Vanki.
    She feels to eat jowar roti, brinjal bhaaji, sweet dishes like "suruli holige", "karachikaayi". She likes to wear ornament like toe rings and nada patti ( ornament to wear on waist) and walk a bit. And she explains that during her pregnancy period, she gets back pain so that she would like to go to Tavarumane (mother's house) and take rest. This entire thing I tried to bring it on the screen. I hope you will definitely appreciate and enjoy my attempt.
    Please SUBSCRIBE to my channel to encourage me. Like 👍 this video 📸 if you like, comment and press the bell 🔔 icon for the video notifications. Please share this video to more and more to create interest in future generations.
    Thank You🙏
    Dr.B. M. Baraker (Khushi)
    ಬಸುರಿ ಬಯಕೆ
    ತಿಂಗಳೆರಡು ತುಂಬಿ ಬಂದು ಬಾಲ ಮಡಿಲಲಿ ಮೂಡಿ ಬಂದು
    ಮಿಡಿಯ ಮಾವಿನ ಕಾಯಿ ಕಡಿಯಂಗಾಗೇತ್ರಿ
    ಬಾಲನ ಬಯಕೆಲಿ ಬಯಸಂಗಾಗೇತ್ರಿ
    ಹಸಿರ ಕಡ್ಡಿಯ ಸೀರಿ ಟೋಪು ಮುಸುಕ ಮ್ಯಾಲೆ ಮಾಡಿ
    ಬಿಸಲಿಗೆ ಬೆನ್ನ ಕೊಟ್ಟು ನಡಿಯಂಗಾಗೇತ್ರಿ
    ಬಾಲನ ಬಯಕೆಲಿ ಬಯಸಂಗಾಗೇತ್ರಿ
    ಹಸಿರ ಕುಪ್ಪಸದ ಮ್ಯಾಲ ಹಸನದೆರಡು ವಂಕಿನಿಟ್ಟು
    ಬಿಸಿಲಿಗೆ ತೋಳು ಕಿರುವಿ ನಡಿಯಂಗಾಗೇತ್ರಿ
    ಬಾಲನ ಬಯಕೆಲಿ ಬಯಸಂಗಾಗೇತ್ರಿ
    ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ ಎಣ್ಣಿ ಬದನೆಯಕಾಯಿ ಪಲ್ಯ
    ಹೊಳಿಯ ದಂಡೀಲಿ ಕುತಗೊಂಡ ಉಣ್ಣಂಗಾಗೇತ್ರಿ
    ಬಾಲನ ಬಯಕೆಲಿ ಬಯಸಂಗಾಗೇತ್ರಿ
    ಬಿಳಿಯ ಜೋಳದ ರೊಟ್ಟಿ ಎಳಿಯ ಚವರಿಕಾಯಿ ಪಲ್ಯ
    ಕೆರಿಗೇರಿ ಮ್ಯಾಲೆ ಕುತಗೊಂಡ ಉಣ್ಣಂಗಾಗೇತ್ರಿ
    ಬಾಲನ ಬಯಕೆಲಿ ಬಯಸಂಗಾಗೇತ್ರಿ
    ಕರದ ಮು ಕರಚಿಕಾಯಿ ಹಪ್ಪಳ ಸಂಡಿಗೆ ಉಪ್ಪನಕಾಯಿ
    ಮಾಳಿಗೆ ಮ್ಯಾಲೆ ಕುತಗೊಂಡ ಕಡಿಯಂಗಾಗೇತ್ರಿ
    ಬಾಲನ ಬಯಕೆಲಿ ಬಯಸಂಗಾಗೇತ್ರಿ
    ಕಾಲಾಗ ಕಾಲಪಿಲ್ಲಿ ಗೆಜ್ಜಿ ಪಟ್ಟಿ ನಡುವಿಗೆ ಕಟ್ಟಿ ಮುಂದೂಕ ಮೂರ ಹೆಜ್ಜಿ ನಡಿಯಂಗಾಗೇತ್ರಿ
    ಬಾಲನ ಬಯಕೆಲಿ ಬಯಸಂಗಾಗೇತ್ರಿ
    ಹೂಗಾರನ ಮನಿಗೆ ಹೋಗಿ ಹೂವಿನ ದಂಡಿ ಹೆಣಿಸಿಕೊಂಡು
    ರಾಯರ ಎಡಗಡೆ ಕುತಗೊಂಡ ಮುಡಿಯಂಗಾಗೇತ್ರಿ
    ಬಾಲನ ಬಯಕೆಲಿ ಬಯಸಂಗಾಗೇತ್ರಿ
    Visit my channel :
    / khushithewow
    SUBSCRIBE 🔔 LIKE 👍 ಮಾಡ್ರಿ ಮತ್ತು ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ😊
    Our another channel :
    / luckilylaxmi
    .............................................................................
    follow on my insta:
    / khushithewow
    .
    .
    .
    .

Комментарии • 44