ಸೇವೆ ಎಂಬ ಯಜ್ಞದಲ್ಲಿ | Seve Emba Yaznadhalli | Sangha Geet | Ganamala | Rss Songs.
HTML-код
- Опубликовано: 4 дек 2024
- ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂಥೆ ಉರಿಯುವಾ
ಧ್ಯೇಯ ಮಹಾಜಲಧಿಯೆಡೆಗೆ ಸಲಿಲವಾಗಿ ಹರಿಯುವಾ
ಲೋಕಹಿತದ ಕಾಯಕ ನಾಡಿಗಭಯದಾಯಕ
ವ್ಯಕ್ತಿವ್ಯಕ್ತಿಯಾಗಬೇಕು ನೈಜ ರಾಷ್ಟ್ರಸೇವಕ ||ಪ||
ಉಚ್ಚನೀಚ ಭೇದವ ಅಳಿಸಿದೂರಗೊಳಿಸುವಾ
ರೊಚ್ಚುರೋಷ ನೀಗುತಾ ಬಂಧುಭಾವ ಬೆಳೆಸುವಾ
ಹಚ್ಚಿ ಜ್ಞಾನದೀವಿಗೆ ಸುತ್ತ ಬೆಳಕ ಬೀರುವಾ
ಕೆಚ್ಚಿನಿಂದ ಮುಂದೆ ಸಾಗಿ ಭರದಿ ಗುರಿಯ ಸೇರುವಾ ||೧||
ಎಲೆಯ ಮರೆಯೊಳರಲಿ ನಗುವ ಸುಮನರಾಶಿಯಂದದಿ
ಕಡಲ ಒಡಲೊಳುಕ್ಕಿ ಮೊರೆವ ಕೋಟಿ ಅಲೆಗಳಂದದಿ
ವಿಮುಖರಾಗಿ ಖ್ಯಾತಿಗೆ ಪ್ರಚಾರಕೆ ಪ್ರಶಂಸೆಗೆ
ಸಹಜಭಾವದಿಂದ ಧುಮುಕಿ ಬನ್ನಿ ಕಾರ್ಯಕ್ಷೇತ್ರಕೆ ||೨||
ದೀನದಲಿತ ಸೇವೆಯೆ ಪರಮ ಆರಾಧನೆ
ಸಾಕು ಬರಿಯ ಬೋಧನೆ ಬೇಕು ಹಿರಿಯ ಸಾಧನೆ
ದಿಟದಿ ನಾವು ಅಳಿಸಬೇಕು ನುಡಿಯ ನಡೆಯ ಅಂತರ
ರಚಿಸಬೇಕು ನವಸಮಾಜ ಸರ್ವಾಂಗಸುಂದರ ||೩||