Amma Kannada song Mothers Special,Jaga aralo malige, Gunaprasad ,Ajayraj,Sanketh

Поделиться
HTML-код
  • Опубликовано: 12 сен 2024
  • Kannada Album Song
    ಜನನಿಯ ಮಡಿಲಲಿ ಜಗ ಅರಳೋ ಮಲ್ಲಿಗೆ
    Singer: Gunaprasad kukkatte
    Lyrics: Shetty Ajayraj
    Editing & Camera : Sanketh_Manglore
    Full Lyrics
    ಗುಡಿಯಲಿರದೆ ಗುಡಿಸಲೊಳಗೆ ದೇವರ ನಾ ಕಂಡೆ.....
    ಅಮ್ಮಾ ಅನ್ನೊ ಅಕ್ಷರದಲ್ಲಿ ಅಕ್ಕರೆಯ ಕಂಡೆ....||2ಸಲ||
    ನಿನ್ನ ಹೆಜ್ಜೆ ಹಿಂದೆ ನನ್ನ ಹೆಜ್ಜೆ ಇಟ್ಟಂದೆ ....
    ನೋವ ಕೊಂದು ಹರುಷ ಎಂಬ ಸಿರಿಯ ನಾ ತಂದೆ ......
    ನೋವಿನಲ್ಲೂ ನಗುತಿಹಳು ನನ್ನಾ ಹಡೆದಂದೆ ...
    ತಾಯಿ ನಿನ್ನ ಪ್ರೀತಿ ಮುಂದೆ ಸೋತು ನಾ ನಿಂದೆ.....
    ||ಗುಡಿಯಲಿರದೆ ಗುಡಿಸಲೊಳಗೆ ದೇವರ ನಾ ಕಂಡೆ.....
    ಅಮ್ಮಾ ಅನ್ನೊ ಅಕ್ಷರದಲ್ಲಿ ಅಕ್ಕರೆಯ ಕಂಡೆ||
    ಚರಣ೧:
    ನಿನ್ನಾ ಬೊಗಸೆ ಕಣ್ಣುಗಳು ...ಪ್ರೀತಿಯ ತಾರೆಯು ....
    ನನ್ನ ಉಸಿರ ಹಸಿರಿಗೆ ಜೀವಧಾರೆಯು ...
    ಕಣ್ಣನೀರಿಗೊಂದು ನಿನ್ನ ನಗುವೆ ಮೂಲಿಕೆ ....
    ಕಣ್ಣ ಮುಂದೆ ನಿನಗೆ ಯಾರಿಲ್ಲ ಹೋಲಿಕೆ...
    ನಿನ್ನ ಪಾದ ಸ್ಪರ್ಶದಿ ...ಗೆಲುವೂ....
    ಮೊಗದಿ ಎಂದೂ ನಿಲ್ಲದು ನೋವು ....
    ಉಸಿರಿನ ಜಪದಲಿ ನಿನದೆ ಹೆಸರಿದೆ.....
    ||ಗುಡಿಯಲಿರದೆ ಗುಡಿಸಲೊಳಗೆ ದೇವರ ನಾ ಕಂಡೆ.....
    ಅಮ್ಮಾ ಅನ್ನೊ ಅಕ್ಷರದಲ್ಲಿ ಅಕ್ಕರೆಯ ಕಂಡೆ....||
    ಚರಣ೨:
    ನಿನ್ನ ಮಡಿಲ ತೊಟ್ಟಿಲಲಿ ಜಗ ಮರೆತ ದಿನವದು ....
    ಅಮ್ಮಾ ನಿನ್ನ ಲಾಲಿಯಲಿ ಸ್ವರರಾಗ ಸ್ವರ್ಗವದು....
    ಮಮತೆಯ ಮಹಲಲ್ಲಿ ಮಾತೆಯೆ ದೇವತೆ ....
    ಪ್ರೀತಿಯ ದನಿಯಲ್ಲಿ ಭೂಮಿ ಭಾನು ನಲಿಯಿತೆ ....
    ತೊದಲು ಮಾತು ...ಮೊದಲು ನೀನೆ ....
    ಮೊದಲ ಮಾತು ಅಮ್ಮಾ ತಾನೆ....
    ಜನನಿಯ ಮಡಿಲಲಿ ಜಗ ಅರಳೊ ಮಲ್ಲಿಗೆ ....
    ||ಗುಡಿಯಲಿರದೆ ಗುಡಿಸಲೊಳಗೆ ದೇವರ ನಾ ಕಂಡೆ.....
    ಅಮ್ಮಾ ಅನ್ನೊ ಅಕ್ಷರದಲ್ಲಿ ಅಕ್ಕರೆಯ ಕಂಡೆ....||
    ಗಾಯಕ: ಗುಣಪ್ರಸಾದ್ ಕುಕ್ಕಟ್ಟೆ
    ಸಾಹಿತ್ಯ: ಶೆಟ್ಟಿ ಅಜಯ್ ರಾಜ್
    ಬ್ಯಾನರ್: ಜಿ.ಪಿ ಕ್ರಿಯೇಷನ್ಸ್
    #MothersDay #Special #Amma

Комментарии • 77