ಸುಗಂಧರಾಜ ತಳಿಗಳು Tuberose varieties | nirantara | sringar | Rajath reakha | Sugandhi

Поделиться
HTML-код
  • Опубликовано: 20 окт 2024
  • #negilayogi
    ನಮಸ್ತೆ ಸ್ನೇಹಿತರೆ, ನಿಮಗೆಲ್ಲರಿಗು ನೇಗಿಲಯೋಗಿ ಯುಟ್ಯೂಬ್ ಚಾನೆಲ್‍ಗೆ ಆದರದ ಸ್ವಾಗತ. ಇದು ಮುಂದುವರೆದ ಸುಗಂದರಾಜ , ಟ್ಯುಬ್ ರೋಸ್ , ರಜನಿಗಂಧ ಹಾಗೂ ಲಿಲ್ಲಿ ಪ್ಲವರ್ , ನೇಲಸಂಪಗಿ ಎಂಬುಗಾಗಿಯು ಕರೆಯುವ ಈ ಹೂವಿನ ಕೃಷಿಯ 2 ನೇ ಭಾಗದ ವಿಡಿಯೋ ಇದಾಗಿದೆ. ಈ ಮೊದಲ ಸುಗಂಧರಾಜ ಹೂವಿನ ಕೃಷಿಯ ವಿಡಿಯೋದಲ್ಲಿ ಸುಗಂಧರಾಜ ಬೆಳೆಯನ್ನು ಯಾವೆಡೆಯೆಲ್ಲಾ ಬೆಳೆಯಲಾಗುತ್ತಿದೆ. ಬಿಡಿ ಹೂವಿಗಾಗಾಗಿ ಮತ್ತು ಹೂದಾನಿಗಳ ಅಲಂಕಾರದಲ್ಲಿ ಬಳಸುವ ಕಡ್ಡಿ ಸಮೇತ ಹೂವಾಗಿ ಕಟಾವು ಮಾಡಲು ಮತ್ತು ಅಲಂಕಾರಿಕ ಪುಷ್ಪವಾಗಿ ಯಾವೆಲ್ಲಾ ತಳಿಗಳು ಪ್ರಚಲಿತದಲ್ಲಿ ಇವೆ ಎಂಬ ವಿಷಯಗಳ ಜೊತೆಗೆ ರಟೂನ್ ಬೆಳೆ ಎಂದರೇನು? ನಾಟಿಗೆ ಬಳಸುವ ಗೆಡ್ಡೆ ಹೇಗಿರಬೇಕು ? ಯಾವಗ ಹೂಬಿಡಲು ಪ್ರಾರಂಬಿಸುತ್ತದೆ ? ಸುಗಂಧರಾಜದಲ್ಲಿ ವಿವಿಧ ತಳಿಗಳು ಮಾತ್ರವಲ್ಲದೆ ಸುಗಂಧರಾಜ ಹೂವಿನ ಸುತ್ತುಗಳು ಮತ್ತು ವೈವಿಧ್ಯತೆಯಿಂದ ವರ್ಗೀಕರಿಸಲಾದ 4 ವಿಧಗಳ ಕುರಿತು ವಿಷಯ ತಿಳಿಸಲಾಗಿತ್ತು. ಯಾರದರೂ ನೋಡಿಲ್ಲದಿದ್ದರೆ ಕೊನೆಯಲ್ಲಿ ಅದರ ಲಿಂಕ್ ಕೊಡಲಾಗುತ್ತದೆ
    ಈ ಲಿಂಕ್ ಕ್ಲಿಕ್ ಮಾಡಿ ನೋಡಬಹುದಾಗಿದೆ: • ಸುಗಂಧರಾಜ ಹೂವಿನ ಕೃಷಿ | ...
    ಇಲ್ಲವೆ ಈ ವಿಡಿಯೋ ಮುಗಿದ ನಂತರ ವಿಡಿಯೊ ಕೆಳಗೆ ಕಾಣುವ ಡಿಸ್ಕ್ರಿಪ್‍ಷನ್ ಬಾಕ್ಸ್‍ನಲ್ಲಿಯೂ ಸಹ ಅದರ ಲಿಂಕ್ ನೀಡಲಾಗಿದೆ ಅಲ್ಲಿ ಕ್ಲಿಕ್ ಮಾಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇಂದಿನ ಈ ವಿಡಿಯೋದಲ್ಲಿ ಪ್ರಚಲಿತದಲ್ಲಿರುವ ಸುಗಂಧರಾಜ ತಳಿಗಳು ಅವುಗಳು ಕೊಡುವ ಇಳುವರಿ ಮತ್ತು ಯಾವ ತಳಿಯಲ್ಲಿ ಎಷ್ಟು ಪ್ರಮಾಣದ ಕಾಂಕ್ರಿಟ್ ಕಾನ್ಸನ್‍ಟ್ರೇಟ್ ಅಂದರೆ ಸುಗಂಧ ದ್ರವ್ಯದ ಅಂಶ ಇರುತ್ತದೆ. ಎಂಬೆಲ್ಲಾ ವಿಷಯಗಳನ್ನು ತಿಳಿದುಕೊಳ್ಳೋಣ. ಹಾಗೂ ಈ ಸುಗಂಧರಾಜ, ರಜನಿಗಂಧ ಅಥವಾ ಟ್ಯುಬ್ ರೋಸ್ ಎಂದು ಕರೆಯುವ ಇದರ ಗೆಡ್ಡೆಗಳು ಅಂದರೆ ಬಲ್ಬುಗಳು ಎಲ್ಲಿ ದೊರೆಯುತ್ತದೆ. ಯಾರು ನಿಮಗೆ ಹೆಚ್ಚಿನ ಮಾಹಿತಿಗಳನ್ನು ನೀಡುತ್ತಾರೆ. ಯಾರೆಲ್ಲಾ ಬೆಳೆಯುತ್ತಿದಾರೆ ಎಂಬ ಮಾಹಿತಿಯನ್ನು ಪಡೆದು ಅವರ ಜಮೀನಿಗೆ ಬೇಟಿ ನೀಡಿ ಅವರ ಸಲಹೆಗಳನ್ನು ಪಡೆದುಕೊಳ್ಳಲು ಯಾರು ನಿಮಗೆ ನೆರವಾಗುವರು ಎಂಬೆಲ್ಲಾ ವಿಷಯಗಳನ್ನು ನಾವಿಂದು ತಿಳಿದುಕೊಳ್ಳೋಣ. ಪೂರ್ಣ ವಿಡಿಯೋ ನೋಡಿ ನಿಮಗೆ ಇಷ್ಟವಾದ ತಳಿಯನ್ನು ಬೆಳೆಯಲು ನೀವು ಮುಂದಾಗಬಹುದು. ನಾನು ಈ ವಿಡಿಯೋದಲ್ಲಿ
    4 ತಳಿಗಳ ಕುರಿತು ವಿವರಣೆ ನೀಡಿದ್ದೇನೆ
    ಮುಂದಿನ ಭಾಗದಲ್ಲಿ 6 ತಳಿಗಳ ವಿವರಣೆ ನೀಡುವೆ
    #negilayogiupdates #negilayogivideo

Комментарии • 14