ಈತನೀಗ ನಮ್ಮ ದೇವನು | ಶ್ರೀ ಗೋಪಾಲ ದಾಸರು | Itaneega Namma Devanu | Sri Gopala Dasaru | Kannada Bhajan
HTML-код
- Опубликовано: 12 сен 2024
- dasarahadugalu...
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya
Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್
ಈತನೀಗ ನಮ್ಮ ದೇವನು ||ಪ||
ಪ್ರೀತಿಯಿಂದಲಿ ಸ್ಮರಿಸುವವರ
ಪಾತಕಗಳ ಪರಿಹರಿಪ ||ಅಪ||
ಅಕ್ರೂರನ ಪ್ರೀತನೀತ
ಚಕ್ರ ಶಂಖ ಧರಿಸಿದಾತ
ನಕ್ರಬಾಧೆಯ ತರಿದು ತನ್ನ
ಭಕ್ತನನ್ನು ಕಾಯ್ದಾತಾ ||೧||
ಅಜಮಿಳನ ಸಲಹಿದಾತ
ವ್ರಜದ ಗೋವು ಕಾಯ್ದಾತ
ಭಜಿಸುವವರ ಬಿಡನು ಪ್ರೀತ
ತ್ರಿಜಗದೊಳಗೆ ಮೆರೆವದಾತ ||೨||
ಸಕಲಗುಣಪೂರ್ಣನೀತ
ಸಕಲದೋಷ ದೂರನೀತ
ಸಕಲಾನಂದ ಪೂರ್ಣನೀತ
ಭಕುತಿಮಂತ್ರಕೊಲಿವದಾತ ||೩||
ಅನಾಥ ಬಾಂಧವನೀತಾ
ಅನಾದಿ ಕಾಲದವನೀತ
ಆ ನಾರಿ ಮೊರೆಯ ಕೇಳಿ
ಆ ನಿಮಿಷದೊಳು ಒದಗಿದಾತ ||೪||
ಕಮಲಮುಖಿಯ ರಮಣನೀತ
ಕಮಲಾಸನಜನಕನೀತ
ಕಮಲಾಕ್ಷ ಗೋಪಾಲವಿಠಲ
ಹೃತ್ಕಮಲದೊಳು ನಿಲುವದಾತ ||೫|
ItanIga namma dEvanu ||pa||
prItiyiMdali smarisuvavara
paatakagaLa pariharipa ||apa||
akrUrana prItanIta
cakra SaMkha dharisidaata
nakrabaadheya taridu tanna
bhaktanannu kaaydaataa ||1||
ajamiLana salahidaata
vrajada gOvu kaaydaata
bhajisuvavara biDanu prIta
trijagadoLage merevadaata ||2||
sakalaguNapUrNanIta
sakaladOSha dUranIta
sakalaanaMda pUrNanIta
bhakutimaMtrakolivadaata ||3||
anaatha baaMdhavanItaa
anaadi kaaladavanIta
aa naari moreya kELi
A nimiShadoLu odagidaata ||4||
kamalamukhiya ramaNanIta
kamalaasanajanakanIta
kamalaakSha gOpaalaviThala
hRutkamaladoLu niluvadaata ||5|
ಹರೇ ಶ್ರೀನಿವಾಸ 🙏🙏🙏👌👌👌💐❤️
ಇಂಪಾದ ಸುಂದರ ಗಾಯನ.
ಹರೇ ಕೃಷ್ಣ 🙏
Super.. super..
🙏🏻🙏🏻🙏🏻🙏🏻🙏🏻
🙏🙏🙏🙏🙏
🙏🙏
🙏🙏🙏👌👌
🙏🙏🙏👌👌👏👏
🙏🙏👏🏾👏🏾👌👌fantastic singing 👌 God gives you more and more strength 💪 like this to sing 🎶