ಹೆಣ್ತನದ ಘನತೆ: ತೂರಬೇಡಿ ಗಾಳಿಗೆ | A song of dignity of women

Поделиться
HTML-код
  • Опубликовано: 16 сен 2024
  • ಕರ್ನಾಟಕದ ಜೀವಪರ, ಮಹಿಳಾಪರ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇರುವ ಸಂಘಸಂಸ್ಥೆಗಳು ಹಾಗೂ ವ್ಯಕ್ತಿಗಳು ಒಗ್ಗೂಡಿ ರಚಿಸಿರುವ ಸೋದರಿತ್ವದ ಜಾಲ "ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ". ಪ್ರೀತಿಯ ರಾಜಕಾರಣವನ್ನು ಪ್ರತಿಪಾದಿಸುವ ಒಕ್ಕೂಟವು ನಡೆಸುವ ಲಿಂಗಸೂಕ್ಷ್ಮತಾ ಕಾರ್ಯಾಗಾರ `ಅರಿವಿನ ಪಯಣ’. ಅರಿವಿನ ಪಯಣದ ವೀಡಿಯೋ ಚಿತ್ರೀಕರಣವು ಶಿವಮೊಗ್ಗದಲ್ಲಿ 2022ರ ಜನವರಿ 1 ಮತ್ತು 2ನೇ ತಾರೀಕು ನಡೆಯಿತು. ಇಲ್ಲಿರುವ ವೀಡಿಯೋದಲ್ಲಿ ಹೆಣ್ತನದ ಘನತೆಯನ್ನು ಎತ್ತಿ ಹಿಡಿಯುವ ʼತೂರಬೇಡಿ ಗಾಳಿಗೆʼ ಎಂಬ ಗೀತೆ ಇದೆ.
    ರಾಜಕೀಯ ಇಚ್ಛಾಶಕ್ತಿಯಿಲ್ಲದ ಪ್ರಭುತ್ವದ ದಮನಕಾರಿ ಅಧಿಕಾರ ಸಂಸ್ಕೃತಿ; ಮಹಿಳೆಯರನ್ನು ಸರಕಾಗಿಸುವ, ದುಡಿಯುವ ಯಂತ್ರಗಳಾಗಿಸುವ, ಲಾಭಕೋರ ಅಭಿವೃದ್ಧಿ ಮಾದರಿಗಳು; ನೆಲ, ಜಲ, ಜನರನ್ನು ಹತ್ತಿಕ್ಕಿ ಲೂಟಿ ಮಾಡುತ್ತಿರುವ ಕೊಳ್ಳುಬಾಕ ಮಾರುಕಟ್ಟೆ ಆರ್ಥಿಕತೆ; ಮಹಿಳೆಯರನ್ನು ಸಹಜೀವಿಯಾಗಿ ನೋಡದೆ ಗುಲಾಮರನ್ನಾಗಿಸುವ ಪುರುಷ ಪ್ರಧಾನ ವ್ಯವಸ್ಥೆ; ಮಹಿಳೆಯರನ್ನು ಹತ್ತಿಕ್ಕುವುದೇ ಧರ್ಮವೆಂದು ಭಾವಿಸುವ ಮತಾಂಧತೆ - ಇವೆಲ್ಲ ಪರಸ್ಪರ ಕೈಜೋಡಿಸಿ, ಒಗ್ಗೂಡಿರುವುದರ ಪರಿಣಾಮವಾಗಿ ಮಹಿಳೆಯರ ಘನತೆಯ ಬದುಕು ಕನಸಾಗುತ್ತಿದೆ. ಹಿಂಸೆಯ ಕತ್ತಲಲ್ಲಿ ಕರಗಿ ಹೋಗದೆ ಬೆಳಕೆಂಬ ಜೀವನದತ್ತ ನಡೆಯಲು ಕೈಗೆ ಕೈಜೋಡಿಸೋಣ ಎಂದು ಈ ಕವಿತೆ ಜಾಗೃತಿಯ ಕರೆ ಕೊಡುತ್ತಿದೆ.

Комментарии • 2