ಸುಕ್ಷೇತ್ರ ಇಂಚಗೇರಿ ಶ್ರೀ ಮಾಧವಾನಂದ ಅವರ ಮಠ |Madhavanand Matha Inchageri.
HTML-код
- Опубликовано: 27 янв 2025
- ಶ್ರೀ ಕ್ಷೇತ್ರ ಇಂಚಗೇರಿ ನವ-ಗಿರಗಳ ನಡುವೆ ನಳನಳಿಸುತ್ತಿರುವ ದೈವ ಭೂಮಿ. ಈ ದೈವನ ದರುಶನ ಪಡೆಯಲು ನೂರಾರು ಮೈಲು ಕ್ರಮಿಸಿ ದಣಿದು ಬರುವವರಿಗೆ ನವ-ಗಿರಿಗಳಲ್ಲೊಂದಾದ ಚಕ್ರ ಮಡ್ಡಿ ಎಂಬ ಗಿರಿ ತುದಿಗೆ ತಲುಪುತ್ತಿದ್ದಂತೆ ಮೈಲು ದೂರದಲ್ಲೊಂದು ಮಿನುಗುವ ತಾರೆ ಗೋಚರಿಸುತ್ತದೆ. ಆ ಮಿಣುಕು ಬೆಳಕು ಕಣ್ಸೆಳೆಯುತ್ತಿದ್ದಂತೆ ನೂರಾರು ಮೈಲಿನ ದಣಿವು ಕ್ಷಣಾರ್ಧದಲ್ಲಿ ಹಗುರಾಗುತ್ತದೆ. ಮನಸ್ಸು ಮಲ್ಲಿಗೆಯಾಗುತ್ತದೆ. ಧನ್ಯತಾ ಭಾವ, ಜೈಘೋಷಗಳು ಮೊಳಗುತ್ತವೆ.ಮುಂದಿನ ಪ್ರತಿಯೊಂದುಹೆಜ್ಜೆ ಭಕ್ತಿಯ ರಸದೌತಣ ಉಣಬಡಿಸುತ್ತದೆ, ಹಾಗೇಯೇ ಪುಟ್ಟಗ್ರಾಮವೊಂದನ್ನು ದಾಟಿ ಫರ್ಲಾಂಗ ಕ್ರಮಿಸುತ್ತಿದ್ದಂತೆ ಅಘಾಧವಾದ ಭಕ್ತಿಸಾಗರ ತನ್ನೆಡೆ ಸೆಳೆದೇ ಬಿಡುತ್ತದೆ, ಅದುವೇ ಶ್ರೀ ಕ್ಷೇತ್ರ ಇಂಚಗೇರಿ ಮಠ.
ಪುಣ್ಯಪುರುಷರ ಪಾದಸ್ಪರ್ಶದಿಂದ ಪುನೀತವಾದ ವಿಜಯಪುರ ಜಿಲ್ಲೆಯ ದೇವರನಿಂಬರಗಿ, ಇಂಚಗೇರಿ, ನಿಂಬಾಳ, ಮಹಾರಾಷ್ಟ್ರದ ಉಮದಿ, ಜತ್ತ, ಬಾಗಲಕೋಟ ಜಿಲ್ಲೆಯ ಜಮಖಂಡಿ, ಚಿಮ್ಮಡ ಮುಂತಾದ ಊರುಗಳು ಅಧ್ಯಾತ್ಮಲೋಕದ ಧ್ರುವತಾರೆಯಂತಿರುವ ಶ್ರೀ ಗುರುಲಿಂಗ ಜಂಗಮ ಮಹಾರಾಜರ ದಿವ್ಯಸಾನ್ನಿಧ್ಯದಿಂದ ಹೆಸರುವಾಸಿಯಾಗಿ ಸಪ್ತ ಮಹಾರಾಜರ ಪುಣ್ಯಧಾಮವಾಗಿದೆ
ಶ್ರೀಕ್ಷೇತ್ರ ಇಂಚಗೇರಿಮಠದ ಮೊದಲ ಗುರು ದೇವರನಿಂಬರಗಿಯ ಗುರುಲಿಂಗ ಜಂಗಮ ಮಹಾರಾಜರು. ಮಹಾರಾಷ್ಟ್ರದ ಉಮದಿಯ ಶ್ರೀ ಭಾವೂಸಾಹೇಬ ಮಹಾರಾಜರು, ಜಮಖಂಡಿಯ ಐನಾಥ ಪ್ರಭು ಹಾಗೂ ಗಿರಿಮಲ್ಲೇಶ್ವರ ಮಹಾರಾಜರು, ಹುಬ್ಬಳ್ಳಿಯ ಶಿವಪ್ರಭು ಮಹಾರಾಜರು, ಶ್ರೀ ಮಾಧವಾನಂದ ಪ್ರಭುಜಿ, ಶ್ರೀ ಗುರುಪುತ್ರೇಶ್ವರ ಮಹಾರಾಜರು, ಶ್ರೀ ಜಗನ್ನಾಥ ಮಹಾರಾಜರು, ಸದ್ಯದ ಶ್ರೀ ಸ. ಸ. ರೇವಣಸಿದ್ಧೇಶ್ವರ ಮಹಾರಾಜರು - ಹೀಗೆ ಗುರುಪರಂಪರೆ ಉತ್ತರೋತ್ತರವಾಗಿ ಸಾಗಿಬಂದಿದೆ.
#inchageri #Indi #bijapur #vijayapur #sudeepsaraf