ಬಿರ್‌ವೆರ‍್ನ ಕೆಸರ‍್ದ ಕಲ

Поделиться
HTML-код
  • Опубликовано: 12 сен 2024
  • ಕಡಬ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ) ಕಡಬ ಘಟಕ ಇದರ ಆತಿಥ್ಯದಲ್ಲಿ ಕಡಬ ತಾಲೂಕು ಬ್ರಹ್ಮಶ್ರೀನಾರಾಯಣ ಗುರು ಬಿಲ್ಲವ ಸಂಘ ಹಾಗೂ ಕೋಟಿ-ಚೆನ್ನಯ್ಯ ಮಿತ್ರವೃಂದ ಆಲಂಕಾರು ಇದರ ಸಹಕಾರದೊಂದಿಗೆ ದಿನಾಂಕ28-08-2022ನೇ ಆದಿತ್ಯವಾರ ಆಲಂಕಾರಿನ ಮಾಯಿಲ್ಗ ಶ್ರೀ ರಕ್ತೇಶ್ವರಿ ದೈವಸ್ಥಾನದ ಬಳಿ ಬಿರುವೆರ್ನ ಕೆಸರ್ದ ಕಲ
    ಎಂಬ ಕಾರ್ಯಕ್ರಮವು ಬಹಳ ವಿಜ್ರಂಭಣೆಯಿಂದ ಯಶಸ್ವಿಯಾಗಿದೆ
    ಈ ಕಾರ್ಯಕ್ರಮವನ್ನು ತಾಯಿ ರಕ್ತೇಶ್ವರಿ ಯ ದೈವಸ್ಥಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕೆಸರ್ದ ಕಲವನ್ನ ಪ್ರವೇಶಿಸಲಾಗಿದೆ.. ನಂತರ ಉದ್ಘಾಟನಾ ಸಮಾರಂಭವನ್ನು ಆರಂಭಿಸಲಾಗಿದೆ. ಪ್ರಾರ್ಥನೆಯನ್ನು ತೃಶ್ವಿ ಪಾಲಪ್ಪೆ ನೆರವೇರಿಸಿದರು ನಂತರ ಯುವವಾಹಿನಿ(ರಿ)
    ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನೆ ಕಾರ್ಯದರ್ಶಿಯಾದ ಶಿವಪ್ರಸಾದ್ ನೂಚಿಲ ಸೇರಿರುವ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಕೆಸರ್ದ ಕಲ ಕಾರ್ಯಕ್ರಮದ ಯಶಸ್ವಿಗೆ ದುಡಿದ ಎಲ್ಲರಿಗೂ ಧನ್ಯವಾದಗಳು ಮುಂದೆ ನಡೆಯುವ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಂಡರುಈ ಸಮಾರಂಭದಲ್ಲಿ ಉದ್ಘಾಟಕರಾಗಿ ಮಾಜಿ ಕೇಂದ್ರ ಸಮಿತಿ ಅಧ್ಯಕ್ಷರು, ಅಕ್ಷಯ ಕಾಲೇಜ್ ಪುತ್ತೂರುಅಧ್ಯಕ್ಷರಾದ ಜಯಂತ್ ನಡುಬೈಲ್ ಉಪಸ್ಥಿತರಿದ್ದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು, ಕಾರ್ಯಕ್ರಮವನ್ನು ಉದ್ದೇಶಿಸಿ ಶುಭಾಶೀರ್ವಾದ ವನ್ನು ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕಾಪಿನಡ್ಕ ಕಾರ್ಯಕ್ರಮಕ್ಕೆ ಶುಭ ನುಡಿದರು, ಹಾಗೂಸೇರಿರುವ ಎಲ್ಲ ಜನಸ್ತೋಮವನ್ನು ನಗೆಯ ಕಡಲಲ್ಲಿ ತೇಲಡಿಸಿದರು. ನಂತರ ಡಾ. ರವಿ ಕಕ್ಕೆಪದವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಬಿರುವೆರ್ನ
    ಕೆಸರ್ದ ಕಲ ಈ ಕಾರ್ಯಕ್ರಮ ಯಶಸ್ವಿಯಾಗಲಿ ಬಂದು ಆಶೀರ್ವಾದವನ್ನು ಮಾಡಿದರು,
    ಸಭೆಯಲ್ಲಿ ಜಯಂತ ನೆಕ್ಕಿಲಾಡಿ ಅಧ್ಯಕ್ಷರು ಕೋಟಿ-ಚೆನ್ನಯ ಮಿತ್ರವೃಂದ ಆಲಂಕಾರು, ಲಿಂಗಪ್ಪ ಪೂಜಾರಿ ಕೇಪುಳು ಹೊಸಮನೆ ಗೌರವ ಸಲಹೆಗಾರರು ಯುವವಾಹಿನಿ(ರಿ) ಕಡಬ ಘಟಕ, ಜಯಪ್ರಕಾಶ್ ದೋಳ ವಲಯ ಸಂಚಾಲಕರು ಬಿಲ್ಲವ ಸಂಘ ಕಡಬ, ಸುಂದರ ಪೂಜಾರಿ ಅಂಗಣ ಉಪಾಧ್ಯಕ್ಷರು ಯುವವಾಹಿನಿ(ರಿ)ಕಡಬ ಘಟಕ, ಶ್ರೀಮತಿ ಅನಿತಾ ಕುತ್ಯಾಡಿ ಮಹಿಳಾ ನಿರ್ದೇಶಕರು ಯುವವಹಿನಿ(ರಿ) ಕಡಬ ಘಟಕ ಹಾಗೂ ಶ್ರೀಮತಿ ಸರಿತಾ ಉಂಡಿಲ ಜೊತೆ ಕಾರ್ಯದರ್ಶಿ ಯುವವಾಹಿನಿ (ರಿ) ಕಡಬ ಘಟಕ ಉಪಸ್ಥಿತರಿದ್ದರು ಸಭಾಧ್ಯಕ್ಷರಾದ ಪ್ರವೀಣ್ ಓಂಕಲ್ ಸಭೆಯನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ನೀವೆಲ್ಲರೂ ಕೈಜೋಡಿಸಿ, ಸಂಜೆ ತನಕ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಆನಂದಿಸೋಣ ಎಂದು ನುಡಿದರು
    ಕಾರ್ಯಕ್ರಮದ ಧನ್ಯವಾದ ಸಮರ್ಪಣೆಯನ್ನು ಸರಿತಾ ಉಂಡಿಲ ಜೊತೆ ಕಾರ್ಯದರ್ಶಿ ಯುವವಾಹಿನಿ(ರಿ) ಕಡಬ ನೆರವೇರಿಸಿದರು
    ಉದ್ಘಾಟನಾ ಸಮಾರಂಭದ ನಿರೂಪಣೆಯನ್ನು ಸುಪ್ರೀತ ಚರಣ್ ಪಾಲಪ್ಪೆ ನೆರವೇರಿಸಿದರು..
    ನಂತರ ಕೆಸರ್ದ ಕಲ ಆಟೋಟ ಸ್ಪರ್ಧೆಗಳು ಆರಂಭವಾಯಿತು ಆಟೋಟ ಸ್ಪರ್ಧೆಗಳ ತೀರ್ಮಾನಗಳನ್ನು ರಾಜೇಶ್ ದೋಳ, ಅಶೋಕ್ ಕೊಯಿಲ ಸಂಪೂರ್ಣವಾಗಿ ನೆರವೇರಿಸಿಕೊಟ್ಟರು ಹಾಗೂ ನಿರ್ವಹಣೆಯನ್ನು ಕೃಷ್ಣಪ್ಪ ಪೂಜಾರಿ ಅಮೈ,ಶಿವಪ್ರಸಾದ್ ನೂಚಿಲ ನಿರ್ವಹಿಸಿದರು.12 ಪುರುಷರ ಹಗ್ಗ ಜಗ್ಗಾಟದ ತಂಡಗಳು,9 ಮಹಿಳೆಯರ ಹಗ್ಗಜಗ್ಗಾಟದ ತಂಡಗಳು,7 ತಂಡ ಮಹಿಳೆಯರ 4×100 ರಿಲೇ,9 ತಂಡ ಪುರುಷರ4×100 ರಿಲೇ ಪಾಲ್ಗೊಂಡು ಗುಂಪು ಆಟೋಟಗಳನ್ನು ಯಶಸ್ವಿಯಾಗಿ ನಡೆಸಿ ಕೊಟ್ಟಿರುತ್ತೇವೆ ಹಾಗೆ 1 ಮತ್ತು 2 ನೇ ತರಗತಿ ವಿದ್ಯಾರ್ಥಿಗಳಿಗೆ ಬಾಲ್ದಿಗೆ ಚೆಂಡು ಹಾಕುವುದು,3 ಮತ್ತು 4 ನೇ ತರಗತಿ ವಿದ್ಯಾರ್ಥಿಗಳಿಗೆ 50 ಮೀಟರ್ ಓಟ ಮತ್ತು 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 100 ಮೀಟರ್ ಓಟ, ಹಾಳೆ ಎಳೆಯುವುದು, ಮೂರು ಕಾಲಿನ ಓಟ ನಡೆದಿರುತದೆ. ಪುರುಷ ಮತ್ತು ಮಹಿಳೆಯರಿಗೆ ಮಡಕೆ ಹೊಡೆಯುವುದು, ಮೂರು ಕಾಲಿನ ಓಟ, ಸುರುಳಿ ಆಟ,100ಮೀಟರ್ ಓಟ ಬಹಳ ಯಶಸ್ವಿಯಾಗಿ ನಡೆದಿರುತ್ತದೆ ಅದು ಸಾರ್ವಜನಿಕವಾಗಿ ನಿಧಿ ಶೋಧನೆ ನಡೆದಿರುತ್ತದೆ. ಮಧ್ಯಾಹ್ನ ಊಟದ ವ್ಯವಸ್ಥೆಯು ಬಹಳ ಸುಂದರವಾಗಿ ನಡೆದಿರುತ್ತದೆ. ಕೆಸರ್ದ ಕಲ ಕಾರ್ಯಕ್ರಮದ ನಿರ್ವಹಣೆಯನ್ನು ಶಿವಪ್ರಸಾದ್ ನೂಚಿಲ ಹಾಗೂ ಕೃಷ್ಣಪ್ಪ ಅಮೈ ನಡೆಸಿ ಕೊಟ್ಟರು.
    ಸಂಜೆ ಗಂಟೆ 6 ಕ್ಕೆ ಸರಿಯಾಗಿ ಸರಿತಾ ಬಿ ಎಲ್ ಇವರ ನಿರೂಪಣೆಯಲ್ಲಿ ಸಮಾರೋಪ ಸಮಾರಂಭ ಆರಂಭವಾಗಿ ಸಭಾಧ್ಯಕ್ಷತೆಯನ್ನು ಪ್ರವೀಣ್ ಓಂಕಲ್ ಅಧ್ಯಕ್ಷರು ಯುವವಹಿನಿ(ರಿ) ಕಡಬ ಘಟಕ ವಹಿಸಿದರು. ಸಭೆಯಲ್ಲಿ ಶಿವಪ್ರಸಾದ್ ನೂಚಿಲ ಸಂಘಟನಾ ಕಾರ್ಯದರ್ಶಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು, ವಸಂತ ಬದಿಬಾಗಿಲು, ಮುತ್ತಪ್ಪ ಪೂಜಾರಿ ನೈಯಲ್ಗ ಅಧ್ಯಕ್ಷರು ಮೂರ್ತೆದಾರ ಸೇವಾ ಸಹಕಾರಿ ಸಂಘ(ನಿ.) ಆಲಂಕಾರು ಜನಾರ್ಧನ ಬಿ ಎಲ್ ಸ್ಥಳ ದಾನಿ, ಪ್ರದೀಶ್ ನಡುವಲ್ ಶಾಖಾ ಮ್ಯಾನೇಜರ್ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ(ನಿ.) ಕಡಬ, ದೀಕ್ಷಿತ್ ಪಣೆಮಜಲು ಉಪಾಧ್ಯಕ್ಷರು ಯುವವಹಿನಿ (ರಿ)ಕಡಬ ಘಟಕ, ಉದಯ ಸಾಲ್ಯಾನ್ ಮಾಯಿಲ್ಗ ಕೊನೆಯ ಸಂಚಾಲಕರು ಬಿಲ್ಲವ ಸಂಘ ಆಲಂಕಾರು, ನವೀನ್ ಸಾಲ್ಯಾನ್ ಮಾಯಿಲ್ಗ( ವಿಟ್ಲ ) ಬಹುಮಾನ ಪ್ರಾಯೋಜಕರು, ಕೃಷ್ಣಪ್ಪ ಅಮೈ ಪ್ರಧಾನ ಕಾರ್ಯದರ್ಶಿ ಯುವವಾಹಿನಿ(ರಿ) ಕಡಬ ಘಟಕ.
    ಬೆಳಿಗ್ಗೆಯಿಂದ ಸಂಜೆ ತನಕ ನಡೆದ ಆಟೋಟ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು ಹಾಗೂ ಕೆಸರ್ದ ಕಲ ಕಾರ್ಯಕ್ರಮ ಯಶಸ್ವಿಗಾಗಿ ಶ್ರಮಿಸಿದ ಎಲ್ಲಾ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
    ಸ್ವಾಗತ ಭಾಷಣವನ್ನು ಮಿಥುನ್ ಸುಂದರ್ ಪಲ್ಲತ್ತಡ್ಕ, ಧನ್ಯವಾದವನ್ನು ಕೃಷ್ಣಪ್ಪ ಅಮೈ ಘಟಕದ ಪ್ರಧಾನ ಕಾರ್ಯದರ್ಶಿ ನೆರವೇರಿಸಿಕೊಟ್ಟರು.
    ಸ್ಪಷ್ಟ ಚಿತ್ರಣದ ನೈಜ ಸೃಷ್ಟಿಯೊಂದಿಗೆ....ನಮ್ಮ ಫೈವ್ ಮೀಡಿಯಾ.ಇನ್.

Комментарии •