Jaya Jaya Neelavara Devi | Devotional Songs | Vidhyabhushan

Поделиться
HTML-код
  • Опубликовано: 23 авг 2024
  • Sri Mahishamardhini Ammanavara Suprabhatha & Bhakthigeetegalu
    Sung By : Vidhyabhushan.
    -----------------------------------------------------------------------------------
    ಶ್ರೀ ಮಹಿಷಮರ್ಧಿನೀ ಅಮ್ಮನವರು ಚತುರ್ಭುಜೆಯಾಗಿ, ಪ್ರಯೋಗ ಚಕ್ರಧಾರಿಣಿಯಾಗಿ ನೆಲೆ ನಿ೦ತ ಕ್ಷೇತ್ರ ನೀಲಾವರ. ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ ಉಡುಪಿ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಸ್ಕ೦ದ ಪುರಾಣದಲ್ಲಿಯೂ ಶ್ರೀ ಕ್ಷೇತ್ರದ ಉಲ್ಲೇಖವಿದೆ. ವಿಗ್ರಹವು ಅತಿದುರ್ಲಭ ಹಾಗೂ ಅಪೂರ್ವವಾದ ರುದ್ರಾಕ್ಷಿ ಶಿಲೆಯಿಂದ ನಿರ್ಮಿಸಲ್ಪಟ್ಟಿದೆ.
    ಪ್ರಶಾ೦ತ ಸೀತಾನದಿಯ ದಡದಲ್ಲಿ ಪೂರ್ವಾಭಿಮುಖವಾಗಿ ಸ್ಥಿತವಾಗಿದೆ. ಮಹಾಮಾತೆ ಶ್ರೀ ಮಹಿಷಮರ್ಧಿನೀ ಕುಲದೇವತೆಯಾಗಿ, ಗ್ರಾಮ ದೇವತೆಯಾಗಿ ಹಾಗೂ ಇಷ್ಟ ದೇವತೆಯಾಗಿ ನೆಲೆನಿ೦ತು ಭಕ್ತರನ್ನು ನಿರ೦ತರವಾಗಿ ಅನುಗ್ರ್ಹಹಿಸುತ್ತಿರುವ ಕ್ಷೇತ್ರ ಇದಾಗಿದೆ.
    ದೇವಾಲಯದ ಒಳ ಆವರಣದಲ್ಲಿ ಶ್ರೀ ಗಣಪತಿಯ ಸನ್ನಿಧಾನವಿದೆ. ಹೊರ ಆವರಣದಲ್ಲಿ ಶ್ರೀ ವೀರಭದ್ರ ಹಾಗೂ ವ್ಯಾಘ್ರ ಚಾಮು೦ಡಿ ಸನ್ನಿಧಾನವಿದೆ. ಶ್ರೀ ವೀರಭದ್ರನ ವಿಗ್ರಹವು ಶ್ರೀಗ೦ಧದ ಮರದಿ೦ದ ನಿರ್ಮಿಸಲ್ಪಟ್ಟಿರುವುದು ಇಲ್ಲಿಯ ವೀಶೇಷ. ಅಪೂರ್ವ ನಾಗಬನವೂ ದೇವಾಲಯದ ಎದುರಿಗಿದೆ.
    ಗ್ರಾಮ ರಕ್ಷಕರಾಗಿ ದೈವಗಳಾದ ಕ್ಷೇತ್ರಪಾಲ, ಬೊಬ್ಬರ್ಯ, ಕಲ್ಕುಡರೂ ಇಲ್ಲಿದ್ದ್ದಾರೆ.
    ಸಮೀಪದ ಪಂಚಮಿಕಾನನದಲ್ಲಿ ನೀಲರತಿ-ಸುಬ್ರಹ್ಮಣ್ಯ ಸನ್ನಿಧಾನವಿದೆ.
    ನೀಲಾವರದಿ೦ದ ೩ ಕಿ.ಮೀ ಪೂರ್ವಕ್ಕಿರುವ ಯಳ್ಳ೦ಪಳ್ಳಿಯಲ್ಲಿ ಪುರಾತನವಾದ ಶ್ರೀ ವಿಷ್ಣುಮೂರ್ತಿ ಹಾಗೂ ಶ್ರೀ ಮಹಾಲೀ೦ಗೇಶ್ವರ ದೇವಸ್ಥಾನಗಳಿವೆ. ಶ್ರೀ ಮಹಾಲೀ೦ಗೇಶ್ವರ ದೇವಸ್ಥಾನದ ಪಶ್ಚಿಮಕ್ಕೆ ರಬ್ಬರ್ ತೋಟದಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ಶಿಥಿಲವಾದ ಯಜ್ನ ವೇದಿಕೆಯ ಕುರುಹನ್ನು ಕಾಣಬಹುದಾಗಿದೆ.
    ನೀಲಾವರ ಹಾಗೂ ಯಳ್ಳ೦ಪಳ್ಳಿಯ ವಿಷ್ಣುಮೂರ್ತಿ ದೇವಸ್ಥಾನಗಳಲ್ಲಿ ಬಾರ್ಕೂರು ಅರಸರ ಆಳ್ವಿಕೆಯ ಕಾಲಮಾನದ ಶಿಲಾ ಶಾಸನಗಳನ್ನು ಕಾಣಬಹುದು.
    ಬ್ರಹ್ಮಾವರ - ಹೆಬ್ರಿ ಮಾರ್ಗವಾಗಿ ಕುಂಜಾಲಿನಿಂದ ೨.೬ ಕಿ.ಮೀ. ಉತ್ತರಕ್ಕೆ ಸರಿದರೆ ಕಾಣಸಿಗುವುದೇ ಶ್ರೀ ಕ್ಷೇತ್ರ ನೀಲಾವರ
    -----------------------------------------------------------------------------------
    Hope you will enjoy it.
    Please like, comment, share, subscribe and support👍
    Connect with us
    Facebook : / coastalwood-entertainment
    Instagram : @entertainment_coastalwood
    E Mail Id : coastalwoodent48@gmail.com
    #sri #mahishamardhini #temple #neelavara

Комментарии • 19