ಸುಮ್ಮನೆ ಬರುವುದೇ ಮುಕ್ತಿ

Поделиться
HTML-код
  • Опубликовано: 6 янв 2025
  • ಸುಮ್ಮನೇ ಬರುವುದೇ ಮುಕ್ತಿ|ಪ|
    ನಮ್ಮ ಅಚ್ಯುತಾನಂತನ ನೆನೆಯದೇ ಭಕ್ತಿ|ಅಪ|
    ಮನದಲ್ಲಿ ದೃಢವಿರಬೇಕು ಪಾಪಿ|
    ಜನರ ಸಂಸರ್ಗವ ನೀಗಲೇ ಬೇಕು|
    ಅನುಮಾನವನು ಬಿಡಬೇಕು|
    ನಮ್ಮ ಮನವ ಶ್ರೀ ಹರಿಗೆ ಒಪ್ಪಿಸಬೇಕು|೧|
    ಕಾಮಕ್ರೋಧವ ಬಿಡಬೇಕು|
    ಹರಿನಾಮ ಸಂಕೀರ್ತನೆ ಮಾಡಲೇಬೇಕು| ಹೇಮದಾಸೆಯ ಬಿಡಬೇಕು| ನಮ್ಮ ಕಮಲನಾಭನ ನೆರೆ ನಂಬಬೇಕು|೨|
    ಮಂದಮತಿಯ ಬಿಡಬೇಕು|
    ದೇಹಬಾಂದವ ಸಂದೇಹ ಬಿಡಬೇಕು| ನಿಂದಿಸಿದರೆ ಹಿಗ್ಗಬೇಕು|ಕೋಪ ಬಂದರೆ ಸೈರಣೆ ತಾಳಲೇಬೇಕು|೩|
    ಗುರುವೇ ಶ್ರೀ ಹರಿ‌ ಎನಬೇಕು|
    ಅಂಥ ಗುರುವೇ ಪರದೈವವೆಂದು
    ತಿಳಿಯ ಬೇಕು|
    ಪರವಸ್ತು ಒಲ್ಲೆ ಎನಬೇಕು|ದೇಹಸ್ಥಿರವಲ್ಲವೆಂತೆಂದು ತಿಳಿಯಲೇ ಬೇಕು|೪|
    ವ್ಯಾಪಾರವನು ಬಿಡಬೇಕು| ನಮ್ಮ ಪುರಂದರವಿಠಲನ ನಂಬಲೇಬೇಕು| ಪಾಪರಹಿತನಾಗಬೇಕು|ಜ್ಣಾನದೀಪದ ಬೆಳಕಿನೊಳೋಡಾಡಬೇಕು|೫|

Комментарии •