LOHITH KUMAR P J
LOHITH KUMAR P J
  • Видео 11
  • Просмотров 13 732
Bhavageethe/Druthi geDadhiru Manave.(ಧೃತಿಗೆಡದಿರು ಮನವೇ)/ LOHITH KUMAR P J/GANESH RAYBAGI/Chitradurga.
ಮನದೇಳುವ ಕ್ಷಣಿಕಾವಧಿಯ ದುಃಖ, ದುಗುಡ, ದಮ್ಮಾನಗಳಿಗಂಜಿ ತನುವ ತೊರೆವಾತ್ಮಗಳಿಗೆಂದೆ ರಚಿತವಾದ ಸಾಂತ್ವನ ಭಾವಗೀತೆ "" ಧೃತಿಗೆಡದಿರು ಮನವೇ..."". ದಯವಿಟ್ಟು ಆಲಿಸಿ, ಸಬ್ಸ್ಕೈಬ್ ಮಾಡುವ ಮೂಲಕ ಸಲಹೆಗೈಯುತಾ ಪ್ರೋತ್ಸಾಹಿಸಿ.
ನನ್ನ ಸಾಹಿತ್ಯದ ಭಾವಗೀತೆಗಳು:
1. ಕೋಟಿ ಮನೆಯನು ಕಟ್ಟಿ ಕೂಡಿಟ್ಟರೇನು??
ruclips.net/video/30B6nmE5kY8/видео.htmlsi=2nWXBImrJEY2FpiH
2. ಓ ಮನಸೇ ಪ್ರೀತಿಸು ನಿನ್ನ ಬಳಿಯಲಿ ಇರುವವರ
ruclips.net/video/tmyPhvGBUHo/видео.htmlsi=rdCLlMqeVoiQlCt-
ಧೃತಿಗೆಡದಿರು ಧೃತಿಗೆಡದಿರು ನೋವಿನಲ್ಲಿ ಬೆಂದ ಮನವೇ.
ಅವಸರದಿ ದುಡಿಕಿ, ತನುವ ಏತಕೆ ನೀನು ತೊರೆಯುವೆ?.
ಸಾವಿರದ ಮನೆಗಳಿಲ್ಲ, ನೋವುಣ್ಣದ ಮನುಜರಿಲ್ಲ,
ಆದರೂ ಈ ದಿಟ ಸತ್ಯವ, ನೀ ಏಕೋ ಅರಿಯಲಿಲ್ಲ,
ಕಡಿದ ಮರಕೆ ಬೇರಿರಲೂ, ಮತ್ತೆ ಚಿಗುರಲಾರದೆ,
ಒಳಿತಾಗೋ ನಂಬಿಕೆಯಲಿ ನೀನು ಬದುಕಬಾರದೆ?.
ಸದಾ ಹರಿಯೋ ನೀರಿಗೆ, ಘೋರ್ಕಲ್ಲು ಕರಗದೆ,
ಕ್ಷಣಿಕ ಕಷ್ಟ ದುಃಖ ಸಹಿಸು, ಮನಸಿನಲ್ಲಿ ಕೊರಗದೆ....
Просмотров: 3 309

Видео

Bhavageethe/ LIFU ISHTENE..!( ಲೈಫ್ ಇಷ್ಟೇನೆ...!) Lohith Kumar P J/ Ganesh N Rayabagi.
Просмотров 3,4 тыс.4 месяца назад
ನನ್ನ ಸಾಹಿತ್ಯದ ಇತರೆ ಭಾವಗೀತೆ: ::: ಓ ಮನಸೇ ಪ್ರೀತಿಸು, ನಿನ್ನ ಬಳಿಯಲಿ ಇರುವವರ::: ruclips.net/video/tmyPhvGBUHo/видео.htmlsi=d4YJ0XJ94MggCTFZ ಕನ್ನಡ ಭಾವಗೀತೆ:: ಲೈಫ್ ಇಷ್ಟೇನೆ....!. ಸಾಹಿತ್ಯ:: ಲೋಹಿತ್ ಕುಮಾರ್ ಪಿ. ಜೆ. ಸಂಗೀತ ಮತ್ತು ಗಾಯನ:: ಗಣೇಶ ಎನ್. ರಾಯಬಾಗಿ ವಾದ್ಯ ಸಂಯೋಜನೆ , ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ :: ವಿನಯ್ ರಂಗದೋಳ್, ಸ್ವರೂಪ್ ಸ್ಟುಡಿಯೋ, ಸಂಕಲನ:: ಜಯಂತ್ ಕುಮಾರ್. ::ಲೈಫ್ ಇಷ್ಟೇನೆ...!:: ಸಾಹಿತ್ಯ. ಕೋಟಿ ಮನೆಯನು ಕಟ್ಟಿ ಕೂಡಿಟ್ಟರೇನು?...
Bhavagethe // "O MANASE..( ಓ ಮನಸೇ..)"LOHITH KUMAR P J / RAGHAVENDRA BEEJADI
Просмотров 4,5 тыс.8 месяцев назад
ಓ ಮನಸೇ - ಲೋಹಿತ್ ಕುಮಾರ್ ಪಿ.ಜೆ_1080p.mp4

Комментарии

  • @yariswamy-1976
    @yariswamy-1976 5 дней назад

    ಅರ್ಥಪೂರ್ಣವಾದ ಕವಿತೆ ಮುಂದೆ ಕಲ್ಮಟ್ಟ ಸರ್ ಹೀಗೆ ಬರಲಿ ಎಂದು ಎಂದು ಹಾರೈಸುತ್ತೇನೆ

  • @Lachamanna.1975
    @Lachamanna.1975 16 дней назад

  • @Lachamanna.1975
    @Lachamanna.1975 16 дней назад

  • @Ravindranayaksannakkibettu
    @Ravindranayaksannakkibettu 20 дней назад

    ಕಡಿದ ಮರಕೆ ಬೇರಿರಲು ಮತ್ತೆ ಚಿಗುರಲಾರದೆ? ಒಳಿತಾಗುವ ನಂಬಿಕೆಯಲಿ ನೀನು ಬದುಕಬಾರದೆ? ನಿಜಕ್ಕೂ ಬಹಳ ಉತ್ತಮವಾದ ಸಂದೇಶ ಇರುವ ಹಾಡು. ಮತ್ತೆ ಮತ್ತೆ ಕೇಳುವಾಗ ಈ ಸಾಲುಗಳೇ ಮನವನ್ನು ಕಾಡುತ್ತವೆ. ನೋವಿನ ಕ್ಷಣಗಳಲ್ಲಿ ಭಾರವಾದ ಹೃದಯನ್ನು ಕಲಕುತ್ತವೆ. ಒಂದು ಕವಿತೆಯಲ್ಲಿ ತತ್ವಜ್ಞಾನವನ್ನು ತರುವುದು ಅಚ್ಟು ಸುಲಭ ಅಲ್ಲ. ತತ್ವಜ್ಞಾನದ ಸಾಲುಗಳು ಬಂದಷ್ಟೂ ಕವಿತೆ ವಾಚ್ಯವಾಗುವ ಅಪಾಯ ಇದೆ. ಲಯ ಮತ್ತು ಅರ್ಥಾನುಸಾರಿಯಾಗಿಸಬೇಕಾದ ದೊಡ್ಡ ಟಾಸ್ಕ್ ಕವಿಯ ಮುಂದಿರುತ್ತದೆ. ಈ ಪ್ರಯತ್ನದಲ್ಲಿ ಲೋಹಿತ್ ಕುಮಾರ್ ಗೆದ್ದಿದ್ದಾರೆ. ಮತ್ತಷ್ಟು ಹೊಸ ಕವಿತೆಗಳ ನಿರೀಕ್ಷೆ ನಿಮ್ಮಿಂದ ಈಗ ಹೆಚ್ಚಾಗಿದೆ.

  • @ravitirakannanavara4910
    @ravitirakannanavara4910 29 дней назад

    ❤❤❤❤

  • @SudhabhatSudhabhat
    @SudhabhatSudhabhat 29 дней назад

    Very beautiful , meaningful song thank you very much 👌👌

    • @LohithKumarPJ
      @LohithKumarPJ 28 дней назад

      Thank you very much for your valuable comment

  • @Vinutha2368
    @Vinutha2368 29 дней назад

    ನನ್ನ ಇಷ್ಟದ ಗಾಯಕ ರಾಘವೇಂದ್ರ ಸರ್ ಅವರ ಮದುರ ಧ್ವನಿಯಲ್ಲಿ ಗೀತೆ ಉತ್ತಮವಾಗಿ ಮೂಡಿ ಬಂದಿದೆ.👌 ಅದ್ಭುತ ಸಾಹಿತ್ಯ ♥️

    • @LohithKumarPJ
      @LohithKumarPJ 28 дней назад

      ಧನ್ಯವಾದಗಳು ನಿಮಗೆ

  • @ashaprakash7002
    @ashaprakash7002 Месяц назад

    Super bro❤❤❤❤🎉

    • @LohithKumarPJ
      @LohithKumarPJ 28 дней назад

      ಧನ್ಯವಾದಗಳು ನಿಮಗೆ

  • @ManjuManju-wy3tg
    @ManjuManju-wy3tg Месяц назад

    ❤🎉

  • @anandbadi3899
    @anandbadi3899 Месяц назад

    Towards Very positive way words ...

    • @LohithKumarPJ
      @LohithKumarPJ Месяц назад

      ತುಂಬಾ ಧನ್ಯವಾದಗಳು ಸರ್

  • @dr.umeshnaik8334
    @dr.umeshnaik8334 Месяц назад

    Nice ❤

  • @rakeshsrrakeshsr2606
    @rakeshsrrakeshsr2606 Месяц назад

    Very special,,great lyrics anna all d best❤

  • @shivanandappamothi5280
    @shivanandappamothi5280 Месяц назад

    ಜಿ ಎಸ್ ಶಿವರುದ್ರಪ್ಪ ಅವರ ಹಾಡುಗಳನ್ನು ಕೇಳಿದಂತೆ ಅನಿಸುತ್ತಿದೆ

    • @LohithKumarPJ
      @LohithKumarPJ Месяц назад

      ಅನಂತಾನಂತ ಧನ್ಯವಾದಗಳು ಸರ್, ನಿಮ್ಮ ಈ ಪ್ರೋತ್ಸಾಹ ನನಗೆ ಪ್ರಶಸ್ತಿಯೇ ಸರಿ.

  • @anithamp2597
    @anithamp2597 Месяц назад

    Very meaningful

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @op.drago24
    @op.drago24 Месяц назад

    Very positive msg

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @sudhahj8496
    @sudhahj8496 Месяц назад

    ಅರ್ಥಪೂರ್ಣವಾಗಿದೆ.ಸೂಪರ್.

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @SubhanDgt
    @SubhanDgt Месяц назад

    ಎಂತಾ ಸೊಗಸಾದ ಸಾಹಿತ್ಯ. ಅರ್ಥದ ಘನತೆಯೂ, ಗಾಂಭಿರ್ಯಕ್ಕೆ ಎಣೆಯೇ ಇಲ್ಲ. ತತ್ವದ ನುಡಿಗಡಣ ಬಲು ಸೊಗಸಾಗಿದೆ ಸರ್.ಶುಭವಾಗಲಿ

    • @LohithKumarPJ
      @LohithKumarPJ Месяц назад

      ಧನ್ಯವಾದಗಳು ಸರ್, ಕವಿಯಾಗಬಯಸುವವರಿಗೆ ನಿಮ್ಮ ಪ್ರೋತ್ಸಾಹ ಜೀವಜಲವಿದ್ದ ಹಾಗೆ.

  • @vidyapurushotham1249
    @vidyapurushotham1249 Месяц назад

    Meaning full lyrics.... All the best.... Go ahead💐

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @rajuhj3722
    @rajuhj3722 Месяц назад

    Very nice bro...

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @lakshmidevibs836
    @lakshmidevibs836 Месяц назад

    Very nice sir❤

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @mallikarjun638
    @mallikarjun638 Месяц назад

    ಅದ್ಭುತವಾದ ಅರ್ಥಪೂರ್ಣವಾದ ಭಾವಗೀತೆ

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @sunilshamnur
    @sunilshamnur Месяц назад

    Very nice

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @SudhaRaghavendra-s3l
    @SudhaRaghavendra-s3l Месяц назад

    Very nice 👍

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @creativehubbygrantha7626
    @creativehubbygrantha7626 Месяц назад

    nice composition sir..one more fantastic and emotional lyrical song..thanks

    • @LohithKumarPJ
      @LohithKumarPJ Месяц назад

      Thank you very much, keep watching and supporting ever. Please

  • @ajitkumarmali3171
    @ajitkumarmali3171 Месяц назад

    Supper sir🎉

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @umashankarpk4281
    @umashankarpk4281 Месяц назад

    Very nice 👍

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @prasannamanjappa5299
    @prasannamanjappa5299 Месяц назад

    ತುಂಬಾ ಚೆನ್ನಾಗಿದೆ sir 👏

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @AkashMT-o6e
    @AkashMT-o6e Месяц назад

    Super bro 👍👍👍👌👌👌

  • @anand.burujanahatti
    @anand.burujanahatti Месяц назад

    All the best Sir, keep rock 🎉

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @jayashreepatremara3463
    @jayashreepatremara3463 Месяц назад

    👌👌👌👏👏👏✌️✌️✌️👍👍👍❤️

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @HasinaInamdar-h9m
    @HasinaInamdar-h9m Месяц назад

    Tumba chennagide...

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @rakshitha.s.vnarayan.7325
    @rakshitha.s.vnarayan.7325 Месяц назад

    ಸಮಯದ ಜೊತೆ ತಾರ್ಕಿಕ ಜ್ಞಾನವ ಹೊಂದದೆ ಅರಿತೋ ಅರಿಯದೆಯೋ ಅನಾವಶ್ಯಕವಾಗಿ ಚಿತ್ತ ಚಾಂಚಲ್ಯ ಗೊಳಿಸಿ ಹಲವು ಬಾರಿ ಮನುಷ್ಯನು ವಾಸ್ತವಿಕೆಯಿಂದ ಹೊರ ಉಳಿದು ಹಲವು ಕ್ಷುಲ್ಲಕ ಕಾರಣಕ್ಕಾಗಿ ದುಡುಕಿನ ನಿರ್ಧಾರಕ್ಕೆ ಒಳಗಾಗುತ್ತಾನೆ, ಅಂತಹ ಒತ್ತಡದ ಮನಗಳಿಗೆ ಸಮಚಿತ್ತದಿಂದ ಸಾಂತ್ವನ ನೀಡಬಲ್ಲ ನಿಮ್ಮ ಸಾಹಿತ್ಯಕ್ಕೆ ಸಾದರ ನಮನಗಳು ಕವಿವರ್ಯ.

    • @LohithKumarPJ
      @LohithKumarPJ Месяц назад

      ನಿಜ ಅಲ್ಲವೇ ಸಾಹಿತ್ಯಾಸಕ್ತರೆ, ಸಾಹಿತ್ಯವನ್ನು ಓದುವುದಿರಲಿ, ಕೇಳಲು ಸಮಯ, ಆಸಕ್ತಿಯಿರದ ಈ ಕಾಲದಲ್ಲಿ, ಈ ಭಾವಗೀತೆ ಯ ತಾತ್ಪರ್ಯವನ್ನು ಇಷ್ಟೊಂದು ಸುಂದರವಾಗಿ, ಸರಳವಾಗಿ ಹಾಗೂ ಸಂಕ್ಷಿಪ್ತವಾಗಿ ತಿಳಿ ಹೇಳಿದ ನಿಮಗೆ ನನ್ನ ಧನ್ಯವಾದಗಳು.

  • @ravitirakannanavara4910
    @ravitirakannanavara4910 Месяц назад

    ಕೇಳಿದರೆ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆನ್ನುವ ಭಾವಗೀತೆ ಅರ್ಥಪೂರ್ಣ ಸಾಹಿತ್ಯ ಹಾಗೂ ಸಂಗೀತ ರಾಗ ಸಂಯೋಜನೆ ❤❤❤❤❤

    • @LohithKumarPJ
      @LohithKumarPJ Месяц назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @ManjuManju-wy3tg
    @ManjuManju-wy3tg Месяц назад

    Nice lyrics keep it up 🎉

  • @ChandraShekarR-m9o
    @ChandraShekarR-m9o 2 месяца назад

    अस्माकं जीवनस्य सर्वं अस्मिन् गीतायां भहु सम्यक् रचितवन्तः सन्ति अस्मिन् गायने ||तेभ्यः बहु बहु ह्रदय पूर्वक धन्यवादाः|🙏🌹🙏🌹🙏🌹❣️❣️

  • @ChandraShekarR-m9o
    @ChandraShekarR-m9o 2 месяца назад

    अस्मिन् देशे सर्वे कतम् भवितव्यम् इति अस्मिन् गीतायां भाहु सम्यक् तथा अत्यन्त अद्भुत रिथ्य उक्तम् अस्ति ||

  • @rakeshsrrakeshsr2606
    @rakeshsrrakeshsr2606 2 месяца назад

    ಮನಸೆಂಬ ಮಂದಿರದಲ್ಲಿ ಕನಸೆಂಬ ಸಾಗರದ ನೆನಪೆಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ ನಿಮ್ಮ ಕವನ 😊 all d best Anna

  • @Nayunavi
    @Nayunavi 4 месяца назад

    Nice singing. ಸಾಹಿತ್ಯ ತುಂಬಾ ಚೆನ್ನಾಗಿದೆ. Connect agi

  • @hemalathamh8021
    @hemalathamh8021 4 месяца назад

    ಕೋಟಿ ಮನೆಯನು ಕಟ್ಟಿ ಕೂಡಿಟ್ಟರೇನು? ಆರು ಮೂರಡಿ ಸಮಾಧಿಯಲಿ ಒಂಟಿ ನೀನು. ಉಸಿರು ಇರೊವರೆಗೆ ನಿನಗೆ ನೂರು ಹೆಸರು, ಅಡಿಯ ಇಟ್ಟಡೆಯಲ್ಲಾ ಬಂಧು ಬಳಗದವರು, ಆಡುವ ಪ್ರತಿ ಮಾತಿನಲ್ಲೂ ನಿನ್ನ ಗುಣಗಾನ, ತನುವು ಮರೆಯಾಗಲು ಇರದು ನಿನ್ನೆಡೆ ಗಮನ. ಕರುಳು ಸಂಬಂಧ ನಿನಗೆ ಇರಲು ಧನ ಕನಕ, ನಿನ್ನವರು ಬಲು ದೂರ ನೀನಾಗಲೂ ನಿರ್ಗತಿಕ, ಅಳುತಾ ಬರುವ ನೆಂಟರು ಬರೀ ಮಸಣದವರೆಗೆ, ಪಾಪ ಪುಣ್ಯಗಳೆಲ್ಲಾ ನಿನ್ನ ಹೆಸರಿನ ಜೊತೆಗೆ. ಅರಿಯೋ ಮನುಜ ನಿನ್ನದು ಏನಿಲ್ಲವೋ ಜಗದಿ!, ಒಡವೆ ಉಡುದಾರ ತಗೆದು, ಏನಿಡುವರು ಕರದಿ?, ಚಟ್ಟದಲಿ ನಿನ್ನ ಹೆಸರಿಲ್ಲದ ಹೆಣ ಹೊತ್ತು, ನಾನು ನಾನೆಂದ ಬಾಯಿಗೆ ಮಣ್ಣು ಬಿತ್ತು.

  • @UmeshUmesh-q7p
    @UmeshUmesh-q7p 4 месяца назад

    Super. Good massage

    • @LohithKumarPJ
      @LohithKumarPJ 4 месяца назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು

  • @rakshitha.s.vnarayan.7325
    @rakshitha.s.vnarayan.7325 4 месяца назад

    ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಂ ಪರಿಸೇವತೇl ಧ್ರುವಾಣಿ ತಸ್ಯ ನಶ್ಯಂತಿ, ಅಧ್ರುವಂ ನಷ್ಟಮೇವ ಚll ಅರ್ಥಾತ್ :- ನಿಶ್ಚಿತವಾದುದನ್ನು ಬಿಟ್ಟು ಅನಿಶ್ಚಿತವಾದುದನ್ನು ಅರಸಹೊರಟರೆ ನಿಶ್ಚಿತವಾದದ್ದು ಸಹ ನಮ್ಮ ಕೈತಪ್ಪಿ ಹೋಗುತ್ತದೆ, ಅನಿಶ್ಚಿತವಾದುದಂತು ದೂರವೇ ಉಳಿದುಬಿಡುತ್ತದೆ. ಎನ್ನುವ ಹಾಗೆ ಅನಿಶ್ಚಿತವಾದ ಕೋಟಿ ಬೆಲೆ ಬಾಳುವ ಅರಮನೆಯನ್ನು ಕಟ್ಟಿದರೇನು ಆರುಮೂರಡಿಯ ನಿಶ್ಚಿತವಾದ ಮನೆಯೇ ಸರ್ವರಿಗೂ ಶಾಶ್ವತವಾದುದು , ಅದರಂತೆ ಬದುಕಿನಲ್ಲಿ ಹೊಗಳಿಕೆ, ತೆಗಳಿಕೆಗಳು ಸಿರಿತನ,ಬಡತನ ಯಾವುದು ಶಾಶ್ವತವಲ್ಲ ಎಲ್ಲವು ನಶ್ವರ ಹಾಗೆಯೇ ಶರೀರವು ಅನಿಶ್ಚಿತವಾದುದು ಆತ್ಮವು ನಿಶ್ಚಿವಾದುದು , ಹುಟ್ಟು, ಬದುಕು,ಹಾಗು ಸಾವಿನ ಸಮಾನಾರ್ಥಕನ್ನು ಸುಲಿತವಾದ ಪದಮಾಲೆಯ ಮೂಲಕ ಬದುಕಿನ ಸಾರವನ್ನು ಸುಮಧುರವಾದ ಸಂಗೀತದೊಂದಿಗೆ ಅರ್ಥ ಸಹಿತವಾಗಿ ಅರ್ಜಿಸಲು ಸುಲಭವಾಗುವಂತೆಯೇ ರಚಿಸಿ ಎಲ್ಲ ಭಾವಜೀವಿಗಳಿಗೆ ನಿಮ್ಮ ಭಾವಗೀತೆಯ ಮೂಲಕ ಇಂದಿನ ಪೀಳಿಗೆಗೆ ಮನಮುಟ್ಟುವಂತೆ ಹೇಳಿದ ನಿಮಗಿದೋ ತುಂಬು ಹೃದಯದ ಧನ್ಯವಾದಗಳು 🙏

    • @LohithKumarPJ
      @LohithKumarPJ 4 месяца назад

      ನಿಮ್ಮ ಸಾಹಿತ್ಯ ಅಭಿರುಚಿಗೆ ನನ್ನ ಅನಂತಾನಂತ ಧನ್ಯವಾದಗಳು, ಎಷ್ಟೊಂದು ಅರ್ಥಪೂರ್ಣವಾಗಿದೆ ನಿಮ್ಮ ವಿಮರ್ಶಾತ್ಮಕ ವಿವರಣೆ. ನಿಮ್ಮಂತಹ ಹಿತೈಷಿಗಳ ಪ್ರೋತ್ಸಾಹ ಹಾಗೂ ಕನ್ನಡಾಭಿಮಾನಿಗಳಿಗೆ ಧನ್ಯವಾದಗಳು. ಹೀಗೆ ಇರಲಿ ನಿಮ್ಮ ಪ್ರೋತ್ಸಾಹ.

  • @prerandance
    @prerandance 4 месяца назад

    Adbuthavaada arthagatbitha badukina janamanada badukuva reethi yannu neevu thumba channagi barediddira. Nimma baraha ege munduvareyali. All the best and congrats lohith avre

    • @LohithKumarPJ
      @LohithKumarPJ 4 месяца назад

      ಧನ್ಯವಾದಗಳು ನಿಮ್ಮ ಕನ್ನಡ ಭಾಷೆ ಬಗೆಗಿನ ಕಾಳಜಿಗೆ. ಧನ್ಯವಾದಗಳು

  • @Rojadevraj
    @Rojadevraj 4 месяца назад

    ಹುಟ್ಟು ಸಾವಿನ ನಡುವೆ ನಮ್ಮದ್ದಲ್ಲದ್ದಕ್ಕೆ ನಂದೇ ಎಂಬ ಭ್ರಮೆಯಲ್ಲಿ ಮನುಷ್ಯನ ಅತ್ಯಮೂಲ್ಯ ವಾದ ಪ್ರೀತಿ, ಕರುಣೆ,ಮಾನವೀಯತೆ , ಸಂಭಂದ, ವಾತ್ಸಲ್ಯ, ಗಳ ಮರೆತ ಮನುಷ್ಯ ತನ್ನದಲ್ಲದರ ವ್ಯಾಮೋಹಕ್ಕೆ ಬಿದ್ದು ಇರುವ ಖುಷಿಗಳನ್ನು ದುಃಖ ದಲ್ಲೇ ಮುಳುಗಿಸಿ, ಬರುವ ನಾಳೆಗಳಿಗಾಗಿ ಜೀವನವ ಮುಡಿಪಿಟ್ಟು ಕೊನೆಗೆ ತನ್ನದಲ್ಲದ ಸಂಪತ್ತನ್ನು ಮತ್ತೊಬ್ಬರ ಕೈಗಿಟ್ಟು ತನಗೆ ಬೇಕಾದ ನೆಮ್ಮದಿಎಂಬ ಸಂಪತ್ತನ್ನು ಸಂಪಾದಿಸದೆ ಒಬ್ಬಂಟಿಯಾಗಿ ಹೋಗಿಬಿಡ್ತಾನೆ...... ನಿಮ್ಮ ಹಾಡಿನ ಅರ್ಥ ಘರ್ಬಿತವಾದ ಸಾಲುಗಳ ಕೇಳಿ ಅರ್ಥ ಮಾಡಿಕೊಂಡು ಜೀವನಕ್ಕೆ ಅಳವಡಿಸಿ ಕೊಳ್ಳಬೇಕಾದದ್ದು ಈಗಿನ ಕಾಲಕ್ಕೆ ತುಂಬಾ ಮುಖ್ಯ ವಾಗಿದೆ...... ನಿಜವಾಗ್ಲೂ ನಿಮ್ಮ ಹಾಡಿನ ಸಾಲುಗಳು ತುಂಬಾ ಭಾವನಾತ್ಮಕ ವಾಗಿವೆ....

    • @LohithKumarPJ
      @LohithKumarPJ 4 месяца назад

      ಒಬ್ಬ ಕನ್ನಡದ ಯುವ ಬರಹಗಾರನಾಗಿ, ನಿಮ್ಮ ಬರವಣಿಗೆ ಕಂಡು ಮೂಕವಿಸ್ಮಿತನಾದೆ. ನಿಮ್ಮಂತಹ ಕನ್ನಡಾಭಿಮಾನಿಗಳು ಇನ್ನೂ ಇರುವುದರಿಂದ ನನ್ನಂತ ಬರಹಗಾರರಿಗೆ ಬರೆಯುವುದರಲ್ಲಿ ಉತ್ಸಾಹ. ಧನ್ಯವಾದಗಳು ನಿಮ್ಮ ಬರವಣಿಗೆಗೆ.

  • @MadihaanjumMadihaanjum
    @MadihaanjumMadihaanjum 4 месяца назад

    💯👍

    • @LohithKumarPJ
      @LohithKumarPJ 4 месяца назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು

  • @Lachamanna.1975
    @Lachamanna.1975 4 месяца назад

    🙏🙏🙏🙏

    • @LohithKumarPJ
      @LohithKumarPJ 4 месяца назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @divyadarshinis3617
    @divyadarshinis3617 4 месяца назад

    ❤super sir 🎉

    • @LohithKumarPJ
      @LohithKumarPJ 4 месяца назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @gowrammas842
    @gowrammas842 4 месяца назад

    Super sir

    • @LohithKumarPJ
      @LohithKumarPJ 4 месяца назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @op.drago24
    @op.drago24 4 месяца назад

    Very nice sir. Meaning full 🎉

    • @LohithKumarPJ
      @LohithKumarPJ 4 месяца назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @lakshmidevibs836
    @lakshmidevibs836 5 месяцев назад

    ತುಂಬಾ ಅದ್ಭುತವಾದ ಸಾಲುಗಳು ನಿಮ್ಮ ಪ್ರತಿಭೆ ಮತ್ತು ಜ್ಞಾನಕ್ಕೆ ಪದಗಳಿಲ್ಲ .❤

    • @LohithKumarPJ
      @LohithKumarPJ 4 месяца назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  • @ashaprakash7002
    @ashaprakash7002 5 месяцев назад

    ❤👌🏻👌🏻👌🏻❤👍🏻

    • @LohithKumarPJ
      @LohithKumarPJ 4 месяца назад

      ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.